
ಮದುವೆಯಾದ ಹೊಸತರಲ್ಲಿ ಮನೆಗೆ ಬಂದ ಸೊಸೆಯ ಕಾಲೆಳೆಯೋದು ಸಾಮಾನ್ಯ. ನವಜೋಡಿಗಳಿಗೆ ತಮಾಷೆ ಮಾಡುವ ಪದ್ಧತಿ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಮದುವೆ ಮನೆ ಅಂದರೆ ಸಾಕು ಎಲ್ಲಾರೂ ಫಿಲ್ಮಿ ಡೈಲಾಗ್ಗಳನ್ನೇ ಹೊಡೆಯುತ್ತಾರೆ. ಇಂತಹದ್ದೇ ಒಂದು ಘಟನೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಖಾಸಿಮ್ ಎಂಬವರು ತಮ್ಮ ಮನೆಯಲ್ಲಿ ನಡೆದ ಇಂತಹದ್ದೇ ಒಂದು ಘಟನೆಯನ್ನ ಟ್ವಿಟರ್ನಲ್ಲಿ ಶೇರ್ ಮಾಡಿದ್ದಾರೆ. ತಮ್ಮ ಅಣ್ಣ ತಮ್ಮ ಪತ್ನಿಗೆ ಹೇಳಿದ ಮಾತನ್ನ ಟ್ವಿಟರ್ನಲ್ಲಿ ಹೇಳಿಕೊಂಡಿದ್ದಾರೆ.
ರಂಜಾನ್ ಉಪವಾಸವನ್ನ ಶುರು ಮಾಡೋಕೂ ಮುನ್ನ ನಡೆದ ಊಟದ ಕಾರ್ಯಕ್ರಮವೊಂದರಲ್ಲಿ ಅಣ್ಣ ತನ್ನ ಅತ್ತಿಗೆಯನ್ನ ಹೇಗೆ ಹೊಗಳಿದ್ದಾರೆ ಅನ್ನೋದನ್ನ ವಿವರಿಸಿದ್ದಾರೆ. ಖಾಸಿಮ್ ಅಣ್ಣ ತಮ್ಮ ಪತ್ನಿಗೆ, ಹಾಗಲಕಾಯಿಯನ್ನ ಮುಟ್ಟಲೇ ಬೇಡ, ನೀವು ಮುಟ್ಟಿದ್ರೆ ಅದು ಕೂಡ ಸಿಹಿಯಾಗುತ್ತೆ ಎಂದು ಹೇಳಿದ್ದಾರಂತೆ.
ಈ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಪೋಸ್ಟ್ ಇದೀಗ 1000 ರಿಟ್ವೀಟ್ ಹಾಗೂ 13 ಸಾವಿರ ಲೈಕ್ಗಳನ್ನ ಸಂಪಾದಿಸಿದೆ.



