ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ಬಾಲಿವುಡ್ ನಟಿ ಕರೀನಾ ಕಪೂರ್ ತಮ್ಮ ಗರ್ಲ್ಸ್ ಗ್ಯಾಂಗ್ ಜೊತೆ ಸೇರಿ ಸಖತ್ ಎಂಜಾಯ್ ಮಾಡ್ತಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ತಮ್ಮ ಗರ್ಲ್ಸ್ ಗ್ಯಾಂಗ್ ಫೋಟೋವನ್ನ ನಟಿ ಶೇರ್ ಮಾಡಿದ್ದಾರೆ. ಪತಿ ಸೈಫ್ ಅಲಿ ಖಾನ್ ಹಾಗೂ ಪುತ್ರ ತೈಮೂರ್ ಅಲಿ ಜೊತೆ ಕರೀನಾ ಪ್ರಸ್ತುತ ಮುಂಬೈನಲ್ಲಿ ವಾಸವಿದ್ದಾರೆ.
ಕರೀನಾ ಕಪೂರ್ ಗರ್ಲ್ಸ್ ಗ್ಯಾಂಗ್ನಲ್ಲಿ ಮಲೈಕಾ ಅರೋರಾ, ಮಲ್ಲಿಕಾ ಭಟ್, ಅಮೃತಾ ಅರೋರಾ ಹಾಗೂ ನತಾಶಾ ಪೂನಾವಾಲರನ್ನ ನೋಡಬಹುದಾಗಿದೆ. ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಮಲೈಕಾ ಅರೋರಾ ಹಾಗೂ ಅಮೃತಾ ಅರೋರಾ ಗೋವಾದಲ್ಲಿದ್ದರು. ಹೀಗಾಗಿ ಈ ಗೆಳತಿಯರ ಗುಂಪು ಹೊಸ ವರ್ಷವನ್ನ ಈಗ ಆಚರಿಸಿದೆ .
ಇತ್ತ ನತಾಶಾ ಪೂನಾವಾಲ ಕೂಡ ತನ್ನ ಗ್ಯಾಂಗ್ ಫೋಟೋವನ್ನ ಶೇರ್ ಮಾಡಿದ್ದಾರೆ. ನಿಮ್ಮದೇ ರೀತಿಯ ಜನರು ಇಲ್ಲದೇ ಜೀವನವನ್ನ ಅನುಭವಿಸೋಕೆ ಸಾಧ್ಯವಿಲ್ಲ. ಅಂದ ಹಾಗೆ ಈ ಗ್ಯಾಂಗ್ ನನ್ನದು ಅಂತಾ ಬರೆದುಕೊಂಡಿದ್ದಾರೆ.
https://www.instagram.com/p/CJy23wrhEYD/?utm_source=ig_web_copy_link
https://www.instagram.com/p/CJytS91Jq5c/?utm_source=ig_web_copy_link