
ಇದೀಗ ಕಂಗನಾ ರಣಾವತ್ ಟ್ವಿಟರ್ನಲ್ಲಿ ಒಂದು ವಿಡಿಯೋ ಶೇರ್ ಮಾಡಿದ್ದು ಇದನ್ನ ನೋಡಿದ ನೆಟ್ಟಿಗರು ಶಾಕ್ ಆಗಿದ್ದಾರೆ. ಕಂಗನಾ ರಣಾವತ್ ವಿಡಿಯೋದ ಜೊತೆಗೆ ತಮ್ಮ ಮುಂದಿನ ಸಿನಿಮಾ ಧಾಕಡ್ನಲ್ಲಿ ಬರುವ ಒಂದು ಆಕ್ಶನ್ ಸೀನ್ ಎಷ್ಟು ಬಿಗ್ ಬಜೆಟ್ ಹೊಂದಿದೆ ಅನ್ನೋದನ್ನ ಹೇಳಿದ್ದಾರೆ.
ಕಂಗನಾ ರಣಾವತ್ ತಮ್ಮ ಮುಂದಿನ ಚಿತ್ರ ಧಾಕಡ್ ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ಇದು ಒಂದು ಸ್ಪೈ ಆಕ್ಷನ್ ಸಿನಿಮಾ ಆಗಿದೆ. ಇದರಲ್ಲಿ ಕಂಗನಾ ಆಕ್ಷನ್ ಸೀನ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ತಮ್ಮ ಆಕ್ಷನ್ ಸೀನ್ ಚಿತ್ರೀಕರಿಸಲು ಭಾರೀ ಮೊತ್ತವನ್ನ ಚಿತ್ರತಂಡ ವ್ಯಯಿಸಿದೆ ಎಂದು ಕಂಗನಾ ಹೇಳಿಕೊಂಡಿದ್ದಾರೆ.
ಕಂಗನಾ ರಣಾವತ್ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಶೇರ್ ಮಾಡುವ ಮೂಲಕ ಈ ವಿಚಾರದ ಬಗ್ಗೆ ಮಾಹಿತಿ ನೀಡಿದ್ದು, ಧಾಕಡ್ ಸಿನಿಮಾದ ಒಂದೇ ಒಂದು ಆಕ್ಷನ್ ಸೀನ್ಗಾಗಿ ಬರೋಬ್ಬರಿ 25 ಕೋಟಿ ರೂಪಾಯಿಗಿಂತಲೂ ಹೆಚ್ಚು ಹಣ ಖರ್ಚು ಮಾಡಲಾಗಿದೆ ಎಂದು ಹೇಳಿಕೊಂಡಿದ್ದಾರೆ.
ಯಾವ ನಿರ್ದೇಶಕನೂ ತರಬೇತಿ ಅವಧಿಗೆ ಇಷ್ಟೊಂದು ಸಮಯ ಹಾಗೂ ಮಹತ್ವವನ್ನ ನೀಡಿದ್ದನ್ನು ನಾನು ಹಿಂದೆಂದೂ ಕಂಡೇ ಇಲ್ಲ. ನಾಳೆ ರಾತ್ರಿಯಿಂದ ಆಕ್ಷನ್ ಸೀನ್ ಒಂದರ ಶೂಟಿಂಗ್ ನಡೆಯಲಿದೆ. ಆದರೆ ನಾನು ಇದರ ತಯಾರಿಯನ್ನೇ ಕಂಡೇ ಆಶ್ಚರ್ಯ ಚಕಿತಳಾಗಿದ್ದೇನೆ. ಒಂದು ಆಕ್ಷನ್ ಸೀನ್ಗಾಗಿ ಬರೋಬ್ಬರಿ 25 ಕೋಟಿ ರೂಪಾಯಿ ಖರ್ಚು ಮಾಡಲಾಗ್ತಿದೆ ಎಂದು ಬರೆದುಕೊಂಡಿದ್ದಾರೆ .