alex Certify ಕಮಲಾ ಹ್ಯಾರಿಸ್​ ಕುಟುಂಬಸ್ಥರ ಊರಿನಲ್ಲಿ ‘ಪೇಟಾ’ ಸಂಭ್ರಮಾಚರಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಮಲಾ ಹ್ಯಾರಿಸ್​ ಕುಟುಂಬಸ್ಥರ ಊರಿನಲ್ಲಿ ‘ಪೇಟಾ’ ಸಂಭ್ರಮಾಚರಣೆ

ತಮಿಳುನಾಡು ಮೂಲದ ಕಮಲಾ ಹ್ಯಾರಿಸ್​​​ ಅಮೆರಿಕ ಉಪಾಧ್ಯಕ್ಷೆಯಾಗಿ ಪದಗ್ರಹಣ ಮಾಡೋದಕ್ಕೆ ಇನ್ನೇನು ಕೆಲವೇ ಗಂಟೆಗಳು ಬಾಕಿ ಉಳಿದಿದೆ. ತಮಿಳುನಾಡಿನಲ್ಲಿರುವ ಕಮಲಾ ಹ್ಯಾರಿಸ್​ ಹುಟ್ಟೂರಿನಲ್ಲಿ ಸಂಭ್ರಮ ಮುಗಿಲುಮುಟ್ಟಿದೆ.

ಈ ನಡುವೆ ಪೇಟಾ ಸಸ್ಯಹಾರಿ ಬಿರಿಯಾನಿ ಹಾಗೂ ಪ್ರೋಟೀಜ್​, ಸಿಹಿ ತಿನಿಸು ಸೇರಿದಂತೆ ವಿವಿಧ ತಿನಿಸುಗಳ ಬಾಸ್ಕೆಟ್​​ಗಳನ್ನ ತುಳಸೇಂದ್ರಪುರಂನಲ್ಲಿರುವ ಎಲ್ಲಾ ನಿವಾಸಿಗಳಿಗೆ ಹಂಚುತ್ತಿದೆ.

ತುಳಸೇಂದ್ರಪುರಂನಲ್ಲಿ ಕಮಲಾ ಹ್ಯಾರಿಸ್​ ತಾತ ಜನಿಸಿದ್ರು. ಹೀಗಾಗಿ ತುಳಸೇಂದ್ರಪುರಂನಲ್ಲಿ ಸಂಭ್ರಮ ಮನೆ ಮಾಡಿದೆ.

ಕಮಲಾ ಹ್ಯಾರಿಸ್​ ಅಮೆರಿಕದ ಉಪಾಧ್ಯಕ್ಷೆಯಾಗಿ ಪದಗ್ರಹಣ ಮಾಡಲಿರುವ ಐತಿಹಾಸಿಕ ಕ್ಷಣದ ಸಂಭ್ರಮವನ್ನ ಇನ್ನಷ್ಟು ಹೆಚ್ಚಿಸುವ ಸಲುವಾಗಿ ಪೇಟಾ ಇಂಡಿಯಾ ಈ ರೀತಿಯ ಪ್ಲಾನ್​ ಮಾಡಿದೆ.

ಅದರಲ್ಲೂ ಕಮಲಾ ಹ್ಯಾರಿಸ್​​ ಕೂಡ ಪ್ರಾಣಿ ಹಿಂಸೆಯನ್ನ ವಿರೋಧಿಸುವ ಕಾರ್ಯಗಳನ್ನ ಮಾಡಿರೋದು ನಮಗೆ ಇನ್ನಷ್ಟು ಖುಷಿ ಕೊಟ್ಟಿದೆ ಎಂದು ಪೇಟಾ ಇಂಡಿಯಾದ ವಕ್ತಾರೆ ರಾಧಿಕಾ ಸೂರ್ಯವಂಶಿ ಹೇಳಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...