alex Certify ಸೈಕಲ್ ಸವಾರನ ಸಾಹಸ ನೋಡಿ ಮೂಗಿನ ಮೇಲೆ ಬೆರಳಿಟ್ಟುಕೊಂಡ ಜನ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೈಕಲ್ ಸವಾರನ ಸಾಹಸ ನೋಡಿ ಮೂಗಿನ ಮೇಲೆ ಬೆರಳಿಟ್ಟುಕೊಂಡ ಜನ…!

ಸೈಕಲ್‌ ಬಳಸಿ ಸರ್ಕಸ್ ಮಾಡುವುದು ಭಾರತೀಯರಿಗೆ ಹೊಸ ವಿಚಾರವೇನಲ್ಲ. ಕಳೆದ ದಶಕದಲ್ಲಿ ಹಳ್ಳಿ ಪಟ್ಟಣಗಳಲ್ಲಿ ಸೈಕಲ್ ಮೂಲಕ ಸರ್ಕಸ್ ಮಾಡಿ ಜೀವನ ಸಾಗಿಸುತ್ತಿದ್ದವರು ನೂರಾರು ಮಂದಿ ಇದ್ದರು. ಜಾತ್ರೆಗಳಲ್ಲಿ ಸೈಕಲ್ ಸರ್ಕಸ್ ಸಾಮಾನ್ಯ ಎಂಬಂತಿತ್ತು. ಆದರೀಗ ಈ ಕಲೆ ಕಣ್ಮರೆಯಾಗಿದೆ.

ಅಂತರ್ಜಾಲದಲ್ಲಿ ಹಳೆಯ ನೆನಪು ಮರುಕಳಿಸುವಂತೆ ಯುವಕನೊಬ್ಬ ಸೈಕಲ್ ಬಳಸಿ ಸಾಹಸ ಮಾಡುವ ವಿಡಿಯೋ ವೈರಲ್ ಆಗಿದೆ. ನೆಟ್ಟಿಗರು ಹುಬ್ಬೇರಿಸಿ ಈ ವಿಡಿಯೋ ನೋಡಿ ವಿಸ್ಮಿತರಾಗಿದ್ದಾರೆ.

ಮೊಹಮ್ಮದ್ ಸೈಫ್ ಶೇಖ್ ಎಂಬ ಸೈಕಲ್ ಸಾಹಸಿ ಅಂತರ್ಜಾಲದಲ್ಲಿ ಸ್ಟಾರ್ ಆಗಿ ಮಾರ್ಪಟ್ಟಿದ್ದಾನೆ.
ಆತ ಅತಿ ಚುರುಕಿನಿಂದ ಕಾಲನ್ನು ನೆಲಕ್ಕೆ ತಾಗಿಸದೇ ತಾನು ಕುಳಿತ ಸೈಕಲ್‌ನ ಹಿಂದಿನ‌ಚಕ್ರ ಎತ್ತಿ ಹಿಡಿಯುವುದು, ತಿರುಗಿಸುವುದು ಸೇರಿ ವಿವಿಧ ಸಾಹಸ ಮಾಡುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...