
ಜಾರ್ಖಂಡ್‌ನ ಮಾನವ ಸಂಪನ್ಮೂಲಾಭಿವೃದ್ಧಿ ಸಚಿವ ಜಾಗರ್ನಾಥ್ ಮಹತೋ ತಮ್ಮ 53ನೇ ವಯಸ್ಸಿನಲ್ಲಿ 11ನೇ ತರಗತಿಯ ವ್ಯಾಸಾಂಗ ಮಾಡಲು ಅರ್ಜಿ ಸಲ್ಲಿಸಿದ್ದಾರೆ.
ಇಲ್ಲಿನ ಬೊಕಾರೋ ಜಿಲ್ಲೆಯ ನವಾಢಿಯಲ್ಲಿರುವ ದೀವಿ ಮಹೊತೋ ಇಂಟರ್ ಕಾಲೇಜಿನಲ್ಲಿ ಸಚಿವರು ದಾಖಲಾಗಿದ್ದಾರೆ. 25 ವರ್ಷಗಳ ಬಳಿಕ ಮೊಹೊತೋ ತಮ್ಮ ಶಿಕ್ಷಣವನ್ನು ಮುಂದುವರೆಸಿದ್ದಾರೆ. HRD ಖಾತೆಯನ್ನು ನಿಭಾಯಿಸುತ್ತಿರುವ ತಾವು, ಕನಿಷ್ಠ ಪದವಿ ಶಿಕ್ಷಣವನ್ನೂ ಪೂರೈಸದೆ ಇರುವ ವಿಚಾರವಾಗಿ ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದ್ದಾರೆ.
ಈ ಟೀಕಾಸ್ತ್ರಗಳಿಂದ ಪಾರಾಗಲು, ತಮ್ಮ ಶಿಕ್ಷಣವನ್ನು ತಡವಾಗಿಯಾದರೂ ಮುಂದುವರೆಸಲು ನಿರ್ಧರಿಸಿದ್ದಾರೆ ಎಂದು ಸಚಿವರ ಆಪ್ತ ವಲಯ ತಿಳಿಸಿದೆ.