alex Certify ಕರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಿ ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡ ವೈದ್ಯ ದಂಪತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಿ ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡ ವೈದ್ಯ ದಂಪತಿ

ರಾಂಚಿ: ಝಾರ್ಕಂಡ್ ನ ವೈದ್ಯ ದಂಪತಿ ತಮ್ಮ ಮದುವೆ ವಾರ್ಷಿಕೋತ್ಸವದ ದಿನವೂ ಕರೊನಾ ರೋಗಿಗಳ ಚಿಕಿತ್ಸೆಯಲ್ಲಿ ಕಳೆದಿದ್ದಾರೆ. ವೈದ್ಯೆ ರಿತಿಕಾ ಮತ್ತು ವೈದ್ಯ ನಿಶಾಂತ್ ಪಾಠಕ್ ದಂಪತಿ ರಾಜೇಂದ್ರ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನಲ್ಲಿ ವೃತ್ತಿ ನಿರ್ವಹಿಸುತ್ತಿದ್ದು, ತಮ್ಮ ಕರ್ತವ್ಯ ನಿಷ್ಠೆಯಿಂದ ಜನರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ನಿಶಾಂತ್ ತಮ್ಮ ಟ್ವಿಟರ್ ಖಾತೆಯಲ್ಲಿ ಪತ್ನಿಯೊಂದಿಗೆ ಪಿಪಿಯಿ ಮಾಸ್ಕ್ ನಲ್ಲಿ ಇರುವ ಫೋಟೋವನ್ನ ಶೇರ್ ಮಾಡಿದ್ದಾರೆ. ಇದು ರಾಜ್ಯದ ಜನರ ಜೊತೆಗೆ, ಝಾರ್ಕಂಡ್ ನ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ಗಮನಕ್ಕೂ ಬಂದಿದೆ. ಮುಖ್ಯಮಂತ್ರಿಗಳು ದಂಪತಿಯನ್ನು ಹಾರೈಸಿದ್ದಾರೆ.

“ನಿಮ್ಮಂತ ಕರೋನಾ ವಾರಿಯರ್ಸ್ ನಿಷ್ಠೆಯಿಂದ ಕರೋನಾ ರೋಗಿಗಳ ಧೈರ್ಯ ಹೆಚ್ಚಿಸುತ್ತದೆ. ನಿಮ್ಮಂತ ವಾರಿಯರ್ಸ್ ಗಳಿಗೆ ನಾವು ಚಿರಋಣಿಗಳು”ಎಂಬ ಅಡಿಬರಹದೊಂದಿಗೆ ನಿಶಾಂತ್ ರವರ ಫೋಟೋವನ್ನು ಹೇಮಂತ್ ಸೊರೇನ್ ರೀಟ್ವಿಟ್ ಮಾಡಿದ್ದಾರೆ. ಟ್ವಿಟ್ಟಿಗರು ಸಹ ವೈದ್ಯ ದಂಪತಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...