ರಾಜಸ್ಥಾನದಲ್ಲಿ ಪ್ರತಿ ದಿನ 3 ಸಾವಿರ ಕೊರೊನಾ ಕೇಸ್ಗಳು ವರದಿಯಾಗುತ್ತಿವೆ. ರಾಜಸ್ಥಾನ ರಾಜಧಾನಿ ಜೈಪುರದಲ್ಲಿ ಬುಧವಾರದಿಂದ ನವೆಂಬರ್ 30ರವರೆಗೆ ಬರೋಬ್ಬರಿ 4 ಸಾವಿರ ಮದುವೆ ನಡೆಯಲಿದೆ.
ಬುಧವಾರದಿಂದ ರವಿವಾರದವರೆಗಿನ ಈ ಸಮಯವನ್ನ ಹಿಂದೂ ಜ್ಯೋತಿಷ್ಯದ ಪ್ರಕಾರ ಅತ್ಯಂತ ಶುಭ ಗಳಿಗೆ ಎಂದು ಪರಿಗಣಿಸಲಾಗಿದೆ. ಹೀಗಾಗಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಮದುವೆ ಕಾರ್ಯಕ್ರಮಗಳು ನಿಶ್ಚಯವಾಗಿವೆ.
ಜೈಪುರ ಒಂದರಲ್ಲೇ ನಿತ್ಯ 600 ಕೊರೊನಾ ಕೇಸ್ಗಳು ದಾಖಲಾಗುತ್ತಿವೆ. ಹೀಗಾಗಿ ಅಶೋಕ್ ಗೆಹ್ಲೋಟ್ ನೇತೃತ್ವದ ಸರ್ಕಾರ ಮದುವೆ ಸಮಾರಂಭಗಳಿಗೆ ಕೇವಲ 100 ಜನರ ಉಪಸ್ಥಿತಿಗೆ ಮಾತ್ರ ಅನುಮತಿ ನೀಡಿದೆ.
ನವೆಂಬರ್ ತಿಂಗಳಲ್ಲಿ ಮದುವೆಯಾಗಲಿರುವ ದಂಪತಿ ಸಲ್ಲಿಸಿರುವ ಅರ್ಜಿ 3000ಕ್ಕೂ ಹೆಚ್ಚಿದೆ. ಆಫ್ಲೈನ್ ಹಾಗೂ ಆನ್ಲೈನ್ ಮಾರ್ಗಗಳಲ್ಲಿ ಅನುಮತಿ ಪತ್ರ ನೀಡುತ್ತಿದ್ದೇವೆ ಅಂತಾ ಹೆಚ್ಚುವರಿ ಕಲೆಕ್ಟರ್ ಶಂಕರ್ ಲಾಲ್ ಸೈನಿ ಹೇಳಿದ್ದಾರೆ.