alex Certify ಜೈಪುರದಲ್ಲಿ ನಡೆಯಲಿರುವ ಮದುವೆ ಸಂಖ್ಯೆ ಎಷ್ಟು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೈಪುರದಲ್ಲಿ ನಡೆಯಲಿರುವ ಮದುವೆ ಸಂಖ್ಯೆ ಎಷ್ಟು ಗೊತ್ತಾ…?

ರಾಜಸ್ಥಾನದಲ್ಲಿ ಪ್ರತಿ ದಿನ 3 ಸಾವಿರ ಕೊರೊನಾ ಕೇಸ್​ಗಳು ವರದಿಯಾಗುತ್ತಿವೆ. ರಾಜಸ್ಥಾನ ರಾಜಧಾನಿ ಜೈಪುರದಲ್ಲಿ ಬುಧವಾರದಿಂದ ನವೆಂಬರ್​ 30ರವರೆಗೆ ಬರೋಬ್ಬರಿ 4 ಸಾವಿರ ಮದುವೆ ನಡೆಯಲಿದೆ.

ಬುಧವಾರದಿಂದ ರವಿವಾರದವರೆಗಿನ ಈ ಸಮಯವನ್ನ ಹಿಂದೂ ಜ್ಯೋತಿಷ್ಯದ ಪ್ರಕಾರ ಅತ್ಯಂತ ಶುಭ ಗಳಿಗೆ ಎಂದು ಪರಿಗಣಿಸಲಾಗಿದೆ. ಹೀಗಾಗಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಮದುವೆ ಕಾರ್ಯಕ್ರಮಗಳು ನಿಶ್ಚಯವಾಗಿವೆ.

ಜೈಪುರ ಒಂದರಲ್ಲೇ ನಿತ್ಯ 600 ಕೊರೊನಾ ಕೇಸ್​ಗಳು ದಾಖಲಾಗುತ್ತಿವೆ. ಹೀಗಾಗಿ ಅಶೋಕ್​ ಗೆಹ್ಲೋಟ್​ ನೇತೃತ್ವದ ಸರ್ಕಾರ ಮದುವೆ ಸಮಾರಂಭಗಳಿಗೆ ಕೇವಲ 100 ಜನರ ಉಪಸ್ಥಿತಿಗೆ ಮಾತ್ರ ಅನುಮತಿ ನೀಡಿದೆ.

ನವೆಂಬರ್​ ತಿಂಗಳಲ್ಲಿ ಮದುವೆಯಾಗಲಿರುವ ದಂಪತಿ ಸಲ್ಲಿಸಿರುವ ಅರ್ಜಿ 3000ಕ್ಕೂ ಹೆಚ್ಚಿದೆ. ಆಫ್​ಲೈನ್ ಹಾಗೂ ಆನ್​ಲೈನ್​ ಮಾರ್ಗಗಳಲ್ಲಿ ಅನುಮತಿ ಪತ್ರ ನೀಡುತ್ತಿದ್ದೇವೆ ಅಂತಾ ಹೆಚ್ಚುವರಿ ಕಲೆಕ್ಟರ್​​ ಶಂಕರ್​ ಲಾಲ್​ ಸೈನಿ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...