
ಪ್ರತಿ ವರ್ಷದಂತೆ ಈ ವರ್ಷವೂ ಶಿಮ್ಲಾದ ಜನತೆ ಸೋಮವಾರ ಮಂಜಿನ ಮಳೆಗೆ ಸಾಕ್ಷಿಯಾಗಿದ್ದಾರೆ. ಹಿಮ ಮಳೆಯಿಂದಾಗಿ ಶಿಮ್ಲಾ ಹಾಗೂ ಮನಾಲಿಗೆ ತೆರಳುವ ಮಾರ್ಗಗಳು ಬ್ಲಾಕ್ ಆಗಿದ್ದು ಪ್ರವಾಸಿಗರು ಮುಂದಿನ ಸೂಚನೆವರೆಗೂ ಈ ಜಾಗಕ್ಕೆ ಬಾರದಂತೆ ಪೊಲೀಸರು ಸೂಚನೆ ನೀಡಿದ್ದಾರೆ.
ಹಿಮಾಚಲ ಪ್ರದೇಶದ ಪ್ರವಾಸಿ ತಾಣಗಳಾದ ಶಿಮ್ಲಾ, ಕುಫ್ರಿ, ಫಾಗು ಹಾಗೂ ನರ್ಕಂದಾಗಳಲ್ಲಿ ಹಿಮ ಮಳೆ ಉಂಟಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹಿಮ ಮಳೆಯ ಫೋಟೋಗಳು ಸಖತ್ ವೈರಲ್ಆಗಿವೆ.
