alex Certify ದುರ್ಗಾ ಮಾತೆ ವೇಷದಲ್ಲಿ ಶೂ ಜಾಹೀರಾತು ನೀಡಿದ ರ್ಯಾಪರ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದುರ್ಗಾ ಮಾತೆ ವೇಷದಲ್ಲಿ ಶೂ ಜಾಹೀರಾತು ನೀಡಿದ ರ್ಯಾಪರ್​..!

ರಾಪರ್ ಕಾರ್ಡಿ ಬಿ, ರಿಬೋಕ್​ ಕಂಪನಿಯ ಹೊಸ ಶೂ ಕಲೆಕ್ಷನ್​​ ಪ್ರಾಯೋಜಕತ್ವಕ್ಕೆ ದುರ್ಗಾ ಮಾತೆಯ ವೇಷ ಧರಿಸುವ ಮೂಲಕ ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿದ್ದಾಳೆ.

28 ವರ್ಷದ ಈ ರ್ಯಾಪರ್​ ಕೆಂಪು ಬಣ್ಣದ ಹೋಬಿಕಾ ಗೌನ್​ ಧರಿಸಿ ದುರ್ಗಾ ಮಾತೆ ರೀತಿಯಲ್ಲಿ ಕುಳಿತುಕೊಂಡಿದ್ದಾಳೆ. ಈಕೆಯ ಎರಡು ಕೈಯಲ್ಲಿ ಶೂ ಇದ್ದರೆ. ಇನ್ನುಳಿದ 8 ಕೈಗಳಲ್ಲಿ ಟ್ಯಾಟೂ ಡಿಸೈನ್​ ಕಾಣಬಹುದಾಗಿದೆ.

ಫುಟ್​ವೇರ್​ ಕಂಪನಿ ಈ ಫೋಟೋವನ್ನ ಇನ್ಸ್​ಟಾಗ್ರಾಂನಲ್ಲಿ ಪೋಸ್ಟ್ ಮಾಡುತ್ತಿದ್ದಂತೆಯೇ ಹಿಂದೂಗಳು ಕೋಪಗೊಂಡಿದ್ದಾರೆ. ಕಮೆಂಟ್​ಗಳ ಮೂಲಕ ನೆಟ್ಟಿಗರು ಶೂ ಕಂಪನಿ ಹಾಗೂ ಕಾರ್ಡಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ನಮ್ಮಲ್ಲಿ ದೇವಸ್ಥಾನದ ಒಳಗೆ ಚಪ್ಪಲಿ ಧರಿಸಲ್ಲ. ದುರ್ಗಾ ಮಾತೆ ಸೌಂದರ್ಯ ಪ್ರದರ್ಶಿಸುವವಳಲ್ಲ. ನಮ್ಮ ಸಂಸ್ಕೃತಿಯನ್ನ ನಮ್ಮ ದೇವರನ್ನ ಈ ರೀತಿ ಅವಮಾನಿಸೋದನ್ನ ಸಹಿಸಲಾಸಾಧ್ಯ ಎಂದು ಹೇಳಿದ್ದಾರೆ.

ಇನ್ನು ತನ್ನ ಫೋಟೋಗೆ ಭಾರಿ ವಿರೋಧ ವ್ಯಕ್ತವಾದ ಹಿನ್ನೆಲೆ ರ್ಯಾಪರ್​ ಕ್ಷಮೆ ಯಾಚಿಸಿದ್ದಾಳೆ. ನಾನು ಈ ಫೋಟೋ ಮೂಲಕ ಹಿಂದೂ ದೇವರಿಗೆ ಅಪಮಾನ ಮಾಡಿದೆ ಅಂತಾ ಅನೇಕರು ಹೇಳಿದ್ದಾರೆ. ಆದರೆ ನನಗೆ ಈ ಶೂಟ್​ ಮಾಡುವ ವೇಳೆ ರಿಬೂಕ್​ ಕಂಪನಿ ನೀವು ದೇವರನ್ನ ಪ್ರತಿನಿಧಿಸುತ್ತಿದ್ದೀರಾ. ದುರ್ಗಾ ಮಾತೆ ಸ್ತ್ರೀ ಶಕ್ತಿ ಎಂದು ಹೇಳಿದ್ದರು. ಹೀಗಾಗಿ ನಾನು ಶೂಟ್​ಗೆ ಒಪ್ಪಿದೆ. ಯಾವುದೇ ಧರ್ಮವನ್ನ ಅಥವಾ ದೇವರನ್ನ ಅವಮಾನಿಸುವ ಉದ್ದೇಶ ನನ್ನದಾಗಿರಲಿಲ್ಲ ಎಂದು ತಪ್ಪೊಪ್ಪಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...