
ಆದರೆ ಇದರ ನಡುವೆಯೂ ಹೈದರಾಬಾದ್ನ ನಾಗೋಲ್ ಬಿಎಸ್ಆರ್ ಕ್ರಿಕೆಟ್ ಮೈದಾನದಲ್ಲಿ ಕೇವಲ ಬ್ರಾಹ್ಮಣರಿಗೆ ಕ್ರಿಕೆಟ್ ಪಂದ್ಯಾವಳಿಯನ್ನ ಆಯೋಜಿಸಲಾಗಿದೆ. ಬಿಎಸ್ಆರ್ ಕ್ರಿಕೆಟ್ ಮೈದಾನದಲ್ಲಿ ನಡೆದ ಬ್ರಾಹ್ಮಣ ಕ್ರಿಕೆಟ್ ಟೂರ್ನಮೆಂಟ್ನ ಪೋಸ್ಟರ್ಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಈ ಪೋಸ್ಟರ್ನಲ್ಲಿ ಪ್ರತಿಯೊಬ್ಬ ಆಟಗಾರ ಐಡಿ ಪ್ರೂಫ್ನ್ನ ಕಡ್ಡಾಯವಾಗಿ ಹೊಂದಿರಬೇಕು ಹಾಗೂ ಬೇರೆ ಜಾತಿಯ ಆಟಗಾರನನ್ನ ಈ ಪಂದ್ಯಕ್ಕೆ ಸೇರಿಸಿಕೊಳ್ಳಲಾಗೋದಿಲ್ಲ ಎಂದು ಸ್ಪಷ್ಟವಾಗಿ ಸೂಚನೆ ನೀಡಲಾಗಿದೆ.
ಈ ಪಂದ್ಯ ಡಿಸೆಂಬರ್ 25 ಹಾಗೂ 26ರಂದು ನಡೆದಿದೆ. ಆದರೆ ಈ ಪಂದ್ಯದ ಪೋಸ್ಟರ್ಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಾ ಇದ್ದು ವ್ಯಾಪಕ ಚರ್ಚೆಗೆ ಕಾರಣವಾಗಿದೆ.