ಕೇಂದ್ರ ಸರ್ಕಾರದ 2021ನೇ ಸಾಲಿನ ಬಜೆಟ್ನಲ್ಲಿ 75 ವರ್ಷ ಮೇಲ್ಪಟ್ಟ ಪಿಂಚಣಿದಾರರಿಗೆ ನೆಮ್ಮದಿಯ ಸುದ್ದಿ ಸಿಕ್ಕಿದೆ.
75 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಆದಾಯ ತೆರಿಗೆ ರಿರ್ಟನ್ಸ್ ಸಲ್ಲಿಕೆಯಿಂದ ವಿನಾಯಿತಿ ನೀಡಲಾಗುವುದು ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ರು.
ಈ ಘೋಷಣೆಯಿಂದಾಗಿ ಕೇವಲ ಪಿಂಚಣಿಯೊಂದನ್ನೇ ಆಧರಿಸಿದ್ದ ಹಿರಿಯ ನಾಗರಿಕರು ತೆರಿಗೆ ವಿನಾಯತಿಯ ಲಾಭವನ್ನ ಪಡೆಯಲಿದ್ದಾರೆ. ಆದರೆ ಬಹುಮೂಲ ಆದಾಯ ಹೊಂದಿರುವ ಹಿರಿಯ ನಾಗರಿಕರಿಗೆ ಈ ಸೌಲಭ್ಯ ಸಿಗೋದಿಲ್ಲ. ಅಲ್ಲದೇ ಈ ಬಾರಿಯ ಬಜೆಟ್ನಲ್ಲಿ ಕೊರೊನಾ ಸೆಸ್ ವಿಧಿಸಲಾಗುತ್ತದೆಯೇ ಎಂಬ ಚರ್ಚೆ ವ್ಯಾಪಕವಾಗಿ ಹರಿದಾಡಿತ್ತು. ಈ ವದಂತಿಗೆ ಕೇಂದ್ರ ಸರ್ಕಾರ ತೆರೆ ಎಳದಿದ್ದು ಈ ಬಾರಿ ಕೊರೊನಾ ಸೆಸ್ನ್ನು ವಿಧಿಸಿಲ್ಲ.