ಕೊರೊನಾ ವೈರಸ್ ಲಾಕ್‌ಡೌನ್ ಆರಂಭಗೊಂಡಾಗಿನಿಂದ ಸಾಮಾಜಿಕ ಜಾಲತಾಣದಲ್ಲಿ ಅನೇಕ ರೀತಿಯ ಚಾಲೆಂಜ್‌ಗಳ ಪರ್ವವೇ ಆರಂಭಗೊಂಡಿದೆ.
ಕೇಂದ್ರ ಸರ್ಕಾರಿ ನೌಕರ ಅರುಣ್ ಬೋತ್ರಾ ಇದೀಗ #KindnessTwitter ಚಾಲೆಂಜ್‌ಗೆ ಚಾಲನೆ ಕೊಟ್ಟಿದ್ದಾರೆ. ನಮ್ಮ ಜೀವನದಲ್ಲಿ ನಾವು ಕಂಡ ಕರುಣಾಮಯಿ ಘಟನೆಗಳನ್ನು ಮೆಲುಕು ಹಾಕುವ ಉದ್ದೇಶದಿಂದ ಈ ಚಾಲೆಂಜ್‌ಗೆ ಚಾಲನೆ ನೀಡಲಾಗಿದೆ.
ಐಪಿಎಸ್ ಅಧಿಕಾರಿ ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ಈ ವಿಡಿಯೋದಲ್ಲಿ, ಮಳೆಯ ನಡುವೆ ಬೀದಿಯೊಂದರಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರು ಚಳಿಯಲ್ಲಿ ನರಳುತ್ತಿದ್ದ ನಾಯಿಯೊಂದಕ್ಕೆ ತಮ್ಮ ಸ್ಕಾರ್ಫ್ ತೊಡಿಸುವುದನ್ನು ನೋಡಬಹುದಾಗಿದೆ.
ಈ ವಿಡಿಯೋ ಕಂಡು ಇಂಪ್ರೆಸ್ ಆದ ನೆಟ್ಟಿಗರು ಖುದ್ದು ತಮ್ಮ ಜೀವನದಲ್ಲಿ ಕಂಡ ಕರುಣಾಮಯಿ ಘಟನೆಗಳನ್ನು #KindnessTwitter ಟ್ಯಾಗ್‌ನಡಿ ಶೇರ್ ಮಾಡಿಕೊಂಡಿದ್ದಾರೆ.
https://twitter.com/deepakomyogi/status/1299624416800731136?ref_src=twsrc%5Etfw%7Ctwcamp%5Etweetembed%7Ctwterm%5E1299624416800731136%7Ctwgr%5E&ref_url=https%3A%2F%2Fwww.news18.com%2Fnews%2Fbuzz%2Fips-officer-starts-kindnesstwitter-and-netizens-share-inspiring-stories-2835897.html