alex Certify ರಾಹುಲ್ ಗಾಂಧಿ ಫೋಟೋ ʼಮಿಸ್ಟರ್‌ ಬೀನ್ʼಗೆ ಹೋಲಿಕೆ ಮಾಡಿ ನೆಟ್ಟಿಗರ ಗೇಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಹುಲ್ ಗಾಂಧಿ ಫೋಟೋ ʼಮಿಸ್ಟರ್‌ ಬೀನ್ʼಗೆ ಹೋಲಿಕೆ ಮಾಡಿ ನೆಟ್ಟಿಗರ ಗೇಲಿ

ಮಿಸ್ಟರ್ ಬೀನ್ ಯಾರಿಗೆ ಗೊತ್ತಿಲ್ಲ ಹೇಳಿ. ಆಬಾಲ ವೃದ್ಧರಾದಿಯಾಗಿ ಎಲ್ಲರಿಗೂ ನಗು ತರಿಸುವ ಮಿಸ್ಟರ್ ಬೀನ್ ಹಾಸ್ಯ ಚಕ್ರವರ್ತಿ. ತಮ್ಮ ಆಂಗಿಕ ಸನ್ನೆಗಳಿಂದಲೇ ನಕ್ಕುನಗಿಸುವ ಬೀನ್ ಒಂದೊಂದು ಎಪಿಸೋಡ್ ಕೂಡ ಇಂದಿಗೂ ಪ್ರಖ್ಯಾತ.

ಒಂದು ಎಪಿಸೋಡ್ ನಲ್ಲಿ ಮಿಸ್ಟರ್ ಬೀನ್ ತನ್ನ ಕಾರಿನ ಮೇಲೆ ಸೋಫಾದಲ್ಲಿ ವಿರಾಜಮಾನರಾಗಿ ಪಟ್ಟಣದಲ್ಲಿ ಸಾಗುವ ಪ್ರಸಂಗ ಒಂದಿದೆ. ಇದೀಗ ರಾಹುಲ್ ಗಾಂಧಿಯನ್ನು ಇದೆ ಪ್ರಸಂಗಕ್ಕೆ ಹೋಲಿಕೆ ಮಾಡಿ ನೆಟ್ಟಿಗರು ಬಿದ್ದು ಬಿದ್ದು ನಗುತ್ತಿದ್ದಾರೆ.

ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಪಂಜಾಬ್ ನಲ್ಲಿ ಮೂರು ದಿನಗಳ ಖೇತಿ ಬಚಾವೋ ಟ್ರ್ಯಾಕ್ಟರ್ ಯಾತ್ರೆ ಹಮ್ಮಿಕೊಂಡಿದೆ. ಇದರಲ್ಲಿ ಪಾಲ್ಗೊಂಡಿರುವ ರಾಹುಲ್ ಗಾಂಧಿ ಟ್ರಾಕ್ಟರ್‌ನಲ್ಲಿ ಕಸ್ಟಮೈಸ್ ಆಗಿ ಅಳವಡಿಸಿರುವ ಸೋಫಾ ಮೇಲೆ ಕುಳಿತು ಸಂಚರಿಸಿದರು. ಈ ವೇಳೆ ತೆಗೆದ ಫೋಟೋ ವೈರಲ್ ಆಗಿದೆ.

ಮಿಸ್ಟರ್ ಬೀನ್ ಇಂಡಿಯನ್ ವರ್ಷನ್, ಕನಿಷ್ಟ ಮಿಸ್ಟರ್ ಬೀನ್ ಒಳ್ಳೆಯ ನಟ ಎಂಬಿತ್ಯಾದಿಯಾಗಿ ಕಿಚಾಯಿಸಿ ಮಿಸ್ಟರ್ ಬೀನ್ ಫೋಟೋ ಜೊತೆಗೆ ರಾಹುಲ್ ಗಾಂಧಿ ಫೋಟೋ ಸೇರಿಸಿ ಟ್ರೋಲ್ ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...