
ಹೊಸ ತಿದ್ದುಪಡಿಯ ಅನ್ವಯ ಭಾರತೀಯರು ತಮ್ಮ ಐಡಿಪಿಯನ್ನ ನವೀಕರಿಸಲು ವಿದೇಶದಲ್ಲಿರುವ ಭಾರತೀಯ ರಾಯಭಾರ ಕಚೇರಿ ಹಾಗೂ ನಿಯೋಗಗಳ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಈ ಅರ್ಜಿಗಳನ್ನ ಭಾರತದ ಆರ್ಟಿಒಗಳಿಗೆ ನೀಡಲಾಗುತ್ತದೆ. ಹಾಗೂ ನವೀಕರಣದ ಬಳಿಕ ಐಡಿಪಿಗಳನ್ನ ಆರ್ಟಿಒಗಳು ಕೊರಿಯರ್ ಮೂಲಕ ತಲುಪಿಸಲಿದ್ದಾರೆ.
ಅಲ್ಲದೇ ಈ ಹೊಸ ತಿದ್ದುಪಡಿಯ ಪ್ರಕಾರ ಅರ್ಜಿದಾರರು ಐಡಿಪಿಗೆ ಅರ್ಜಿ ಸಲ್ಲಿಸುವ ವೇಳೆ ಮೆಡಿಕಲ್ ಸರ್ಟಿಫಿಕೇಟ್ ಹಾಗೂ ಅಧಿಕೃತ ವೀಸಾ ಸಲ್ಲಿಸುವ ಅಗತ್ಯವಿಲ್ಲವೆಂದು ಹೇಳಿದೆ. ಈಗಾಗಲೇ ಡ್ರೈವಿಂಗ್ ಲೈಸೆನ್ಸ್ ಹೊಂದಿರುವವರು ಮತ್ತೊಮ್ಮೆ ವೈದ್ಯಕೀಯ ಪ್ರಮಾಣ ಪತ್ರ ಸಲ್ಲಿಸುವ ಅಗತ್ಯ ಬರೋದಿಲ್ಲ ಎಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ಅಭಿಪ್ರಾಯಪಟ್ಟಿದೆ. ಜೊತೆಗೆ, ಆಗಮನದ ಮೇಲೆ ವೀಸಾ ನೀಡುವ ದೇಶಗಳಿವೆ ಅಥವಾ ಕೊನೆಯ ಕ್ಷಣದಲ್ಲಿ ವೀಸಾಗಳನ್ನು ನೀಡಲಾಗುತ್ತದೆ. ಈ ಷರತ್ತುಗಳನ್ನು ಗಮನದಲ್ಲಿಟ್ಟುಕೊಂಡು, ಸರ್ಕಾರವು ಈಗ ವೀಸಾ ಇಲ್ಲದೆ ಐಡಿಪಿ ಅರ್ಜಿಗಳನ್ನು ಅನುಮತಿಸುತ್ತದೆ.