
ಗಾಯಗೊಂಡಿದ್ದ ಕಾಡಾನೆಯೊಂದಕ್ಕೆ ತಮಿಳು ನಾಡಿನ ನೀಲಗಿರಿ ಪ್ರದೇಶದಲ್ಲಿ ಶುಶ್ರೂಷೆ ನೀಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.
ಬೆನ್ನು ನೋವಿನಿಂದ ಬಳಲುತ್ತಿರುವ ಈ ಗಂಡಾನೆಯನ್ನು ಇನ್ನಷ್ಟು ಆನೆಗಳ ನೆರವಿನೊಂದಿಗೆ ಪಶುವೈದ್ಯರು ಆರೈಕೆ ಮಾಡುತ್ತಿರುವುದನ್ನು ನೋಡಬಹುದಾಗಿದೆ.
ಗಾಯಗೊಂಡ ಆನೆಯ ಕಾಲನ್ನು ಹಗ್ಗದಿಂದ ಕಟ್ಟಲಾಗಿದ್ದು, ಮತ್ತೊಂದು ಆನೆಯ ಬೆನ್ನ ಮೇಲೆ ವೈದ್ಯರು ಕುಳಿತುಕೊಂಡು ಚಿಕಿತ್ಸೆಯ ಪ್ರಕ್ರಿಯೆಗಳನ್ನು ಮಾಡುತ್ತಿರುವುದನ್ನು ನೋಡಬಹುದಾಗಿದೆ. ಈ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಶಾಂತಾ ನಂದಾ ಶೇರ್ ಮಾಡಿಕೊಂಡಿದ್ದಾರೆ.