alex Certify ಪದೇ ಪದೇ ಪ್ರಿಯಕರನ ಜೊತೆ ಓಡಿ ಹೋಗ್ತಿದ್ದ ಪತ್ನಿಗೆ ಪತಿ ಮಾಡಿದ್ದೇನು….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪದೇ ಪದೇ ಪ್ರಿಯಕರನ ಜೊತೆ ಓಡಿ ಹೋಗ್ತಿದ್ದ ಪತ್ನಿಗೆ ಪತಿ ಮಾಡಿದ್ದೇನು….?

ಇಂದೋರ್ ನಲ್ಲಿ ಪತ್ನಿ ಹತ್ಯೆ ಮಾಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಆರೋಪಿ ಪತ್ನಿಗೆ ನಿದ್ರೆ ಮಾತ್ರೆ ನೀಡಿ ಹತ್ಯೆ ಮಾಡಿದ್ದಲ್ಲದೆ ಕತ್ತು ಹಿಸುಕಿದ್ದ. ಬೆಳಿಗ್ಗೆ ಹಾರ್ಟ್ ಅಟ್ಯಾಕ್ ನಾಟಕವಾಡಿದ್ದ.

ಬೆಟ್ಮಾದ ದಿಲೀಪ್ ಕುಮಾರ್ ಪತ್ನಿ ಸಂಜು ಫೆಬ್ರವರಿಯಲ್ಲಿ ಪ್ರೇಮಿ ಜೊತೆ ಓಡಿ ಹೋಗಿದ್ದಳು. ನಂತ್ರ ಮನೆಗೆ ವಾಪಸ್ ಬಂದಿದ್ದಳು. ಪತಿ ಜೊತೆ ಇರುವುದಾಗಿ ಹೇಳಿದ್ದಳು. ಇದ್ರಿಂದ ದಿಲೀಪ್ ಸಾಕಷ್ಟು ಮುಜುಗರಕ್ಕೊಳಗಾಗಿದ್ದ. ಆಗಸ್ಟ್ 3ರಂದು ಮತ್ತೆ ಪತ್ನಿ, ಪ್ರೇಮಿ ಜೊತೆ ಓಡಿ ಹೋಗುವ ಪ್ರಯತ್ನ ನಡೆಸಿದ್ದಳು.

ಪತ್ನಿಯನ್ನು ಹಿಡಿದು ತಂದಿದ್ದ ಪತಿ ಕೂದಲು ಕತ್ತರಿಸಿ ಮನೆಯಲ್ಲಿ ಕೂಡಿಹಾಕಿದ್ದ. ಆಕೆ ಹೆಸರಿನಲ್ಲಿ ಜಮೀನಿದ್ದು, ಆಕೆ ಓಡಿ ಹೋದ್ರೆ ಅದು ಸಿಗುವುದಿಲ್ಲವೆಂಬ ಕಾರಣಕ್ಕೆ ಹತ್ಯೆ ಪ್ಲಾನ್ ಮಾಡಿದ್ದಾನೆ. ಆಕೆ ಊಟದಲ್ಲಿ ನಿದ್ರೆ ಮಾತ್ರೆ ಹಾಕಿದ್ದಾನೆ. ಪತ್ನಿ ಬದುಕಿದ್ರೆ ಎಂಬ ಕಾರಣಕ್ಕೆ ರಾತ್ರಿ ಕತ್ತು ಹಿಸುಕಿದ್ದಾನೆ. ಬೆಳಿಗ್ಗೆ ಹೃದಯಾಘಾತವಾಗಿದೆ ಎಂದು ಎಲ್ಲರನ್ನು ನಂಬಿಸಿ ಅಂತ್ಯಸಂಸ್ಕಾರ ನಡೆಸಿದ್ದಾನೆ. ಇದು ಪೊಲೀಸರಿಗೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದು ವಿಚಾರಿಸಿದ್ದಾರೆ. ನಿಮಿಷಕ್ಕೊಂದು ಹೇಳಿಕೆ ನೀಡ್ತಿದ್ದ ದಿಲೀಪ್ ಕೊನೆಯಲ್ಲಿ ಬಾಯ್ಬಿಟ್ಟಿದ್ದಾನೆ.indore: wife ran away with lover again and again, now angry ...

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...