ಕೊರೊನಾದ ಎರಡನೇ ಭೀಕರ ಅಲೆಯಿಂದಾಗಿ ದೇಶ ತತ್ತರಿಸಿ ಹೋಗಿದೆ. ದೇಶದ ವಿವಿಧ ರಾಜ್ಯಗಳು ಕೊರೊನಾವನ್ನ ನಿಯಂತ್ರಣಕ್ಕೆ ತರಲು ಸಾಕಷ್ಟು ಕಠಿಣ ಕ್ರಮಗಳನ್ನ ಕೈಗೊಳ್ತಾನೇ ಇದೆ. ಈಗಾಗಲೇ ನೈಟ್ ಕರ್ಫ್ಯೂ, ವೀಕೆಂಡ್ ಲಾಕ್ಡೌನ್ , ಅಘೋಷಿತ ಲಾಕ್ಡೌನ್ ಹೀಗೆ ನಾನಾ ಕ್ರಮಗಳನ್ನ ಬಳಕೆ ಮಾಡಲಾಗುತ್ತಿದೆ. ಇದು ಮಾತ್ರವಲ್ಲದೆ ಕೊರೊನಾ ಮಾರ್ಗಸೂಚಿಗಳನ್ನ ಪಾಲಿಸಿದವರಿಗೂ ವಿವಿಧ ರೀತಿಯ ಶಿಕ್ಷೆಯನ್ನೂ ನೀಡಲಾಗ್ತಿದೆ.
ದಂಡ ವಿಧಿಸೋದ್ರಿಂದ ಹಿಡಿದು ಸಾರ್ವಜನಿಕವಾಗಿಯೇ ಶಿಕ್ಷೆ ನೀಡುವ ಮೂಲಕ ಪೊಲೀಸರು ಜನರಲ್ಲಿ ಕೊರೊನಾ ಜಾಗೃತಿ ಮೂಡಿಸುತ್ತಿದ್ದಾರೆ. ಇಂದೋರ್ನ ಪೊಲೀಸರು ಸಹ ಲಾಕ್ಡೌನ್ ನಿರ್ಬಂಧಗಳನ್ನ ಉಲ್ಲಂಘಿಸುವವರಿಗೆ ಡಿಫರೆಂಟ್ ಶಿಕ್ಷೆಯನ್ನ ನೀಡಿದ್ದಾರೆ.
ದೆಪಾಲ್ಪುರ್ ಗ್ರಾಮದಲ್ಲಿ ಲಾಕ್ಡೌನ್ ನಿಯಮ ಉಲ್ಲಂಘಿಸಿದವರಿಗೆ ಪೊಲೀಸರು ಸಾರ್ವಜನಿಕವಾಗಿ ಉಠಕ್ ಬೈಟಕ್ ಶಿಕ್ಷೆ ನೀಡಿದ್ದಾರೆ. ಲಾಕ್ಡೌನ್ ನಿಯಮ ಉಲ್ಲಂಘಿಸಿದವರು ಉಠಕ್ ಬೈಟಕ್ ಮಾಡುತ್ತಿದ್ದರೆ ಅಲ್ಲೇ ಇದ್ದ ಇನ್ನೊಬ್ಬ ವ್ಯಕ್ತಿ ಡೋಲು ಬಾರಿಸಿದ್ದಾರೆ.
ಒಂದೇ ಬೈಕಿನಲ್ಲಿ ಕೂತ ನಾಲ್ವರು ಮದುವೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಲಾಕ್ಡೌನ್ ಸಂದರ್ಭದಲ್ಲಿ ಅಡ್ಡಾಡ್ಡುತ್ತಿದ್ದ ಕಾರಣಕ್ಕೆ ಪೊಲೀಸರು ಈ ಶಿಕ್ಷೆ ನೀಡಿದ್ದಾರೆ.