ನವದೆಹಲಿ: ಕೋವಿಡ್ ನಿಂದ ಬಾಧಿತವಾಗಿದ್ದ ಭಾರತದ ಆರ್ಥಿಕತೆ ನಿರೀಕ್ಷೆಗೂ ಮೀರಿ ಸುಧಾರಣೆ ಕಾಣುತ್ತಿದೆ ಎಂದು ವರದಿಗಳು ಹೇಳುತ್ತಿವೆ.
ವರ್ಷದಿಂದ ವರ್ಷಕ್ಕೆ (y-o-y) ರಿಯಲ್ ಗ್ರಾಸ್ ಡೊಮೆಸ್ಟಿಕ್ ಪ್ರೊಡಕ್ಟ್ (ಜಿಡಿಪಿ) ಕುಗ್ಗುವಿಕೆ ಎರಡನೇ ತ್ರೈಮಾಸಿಕದಲ್ಲಿ ಶೇ. 23.9 ಇದ್ದದ್ದು, ಮೂರನೇ ತ್ರೈಮಾಸಿಕದಲ್ಲಿ ಶೇ. 7.5ಕ್ಕೆ ಇಳಿದಿದೆ.
ಸರ್ಕಾರದ ಯಾವುದೇ ನಿರ್ಧಿಷ್ಟ ಕ್ರಮವಿಲ್ಲದೆ ಅತಿ ವೇಗವಾಗಿ ಆರ್ಥಿಕತೆಯ ಚೇತರಿಕೆ ಹೇಗೆ ಸಾಧ್ಯವಾಗುತ್ತಿದೆ. ಇದು ನಿಜವೇ ಎಂಬುದು ಇನ್ನೂ ನಿಗೂಢವಾಗಿಯೇ ಇದೆ.
SPECIAL NEWS: ಈ ದೇಶದ ಪ್ರಧಾನಿ ಹಾಗೂ ರಾಷ್ಟ್ರಪತಿ ಇಬ್ಬರೂ ಮಹಿಳೆಯರು..!
ಕಳೆದ ಐದು ವರ್ಷಗಳಲ್ಲಿ 2020 ರಲ್ಲಿ ಅತಿ ಕಡಿಮೆ ಆರ್ಥಿಕತೆಯ ಬೆಳವಣಿಗೆಯಾಗಿದೆ. 2020 ರ ಏಪ್ರಿಲ್ ನಿಂದ ನವೆಂಬರ್ ವರೆಗೆ ಸರ್ಕಾರ ವಿವಿಧ ಯೋಜನೆ ಘೋಷಿಸಿದಾಗ ಶೇ.4.7 ರಷ್ಟು ಬೆಳವಣಿಗೆ ಕಂಡಿತ್ತು.