ಇಲ್ಯೂಷನ್ ಮ್ಯೂಸಿಯಂಗಳು ಕಣ್ಣಿಗೆ ಆನಂದ ನೀಡೋದ್ರ ಜೊತೆಗೆ ಮೆದುಳಿಗೆ ಕೆಲಸ ಕೊಡೋದು ಜಾಸ್ತಿ. ಇದೀಗ ಇಂತಹ ಇಲ್ಯೂಷನ್ ವಸ್ತು ಸಂಗ್ರಹಾಲಯ ದೆಹಲಿಯ ಕನಾಟ್ ಪ್ರದೇಶದಲ್ಲಿ ಫೆಬ್ರವರಿ 10ರಿಂದ ಸಾರ್ವಜನಿಕ ಪ್ರವೇಶಕ್ಕೆ ಮುಕ್ತವಾಗಿದೆ.
ಬಾಲ್ಕನ್ಸ್ನ ಕ್ರೋಷಿಯಾ ದೇಶದಲ್ಲಿ 2015ರಲ್ಲಿ ಮೊದಲ ಇಲ್ಯೂಷನ್ ವಸ್ತು ಸಂಗ್ರಹಾಲಯ ನಿರ್ಮಾಣವಾಯ್ತು. ಇದಾದ ಬಳಿಕ ಜಗತ್ತಿನ ಬಹುತೇಕ ಕಡೆ ಇಂತಹ ವಸ್ತು ಸಂಗ್ರಹಾಲಯವನ್ನ ನಿರ್ಮಿಸಲಾಗಿದೆ. ಇದರ 30ನೇ ಸ್ಥಳವಾಗಿ ನವದೆಹಲಿಯನ್ನ ಆಯ್ಕೆ ಮಾಡಿಕೊಳ್ಳಲಾಗಿದೆ.
ಕೆನಡಾದ ಸಂಶೋಧನೆಯಲ್ಲಿ ಬಯಲಾಯ್ತು ಕೋವಿಡ್ 19 ಕುರಿತ ಮತ್ತೊಂದು ಭಯಾನಕ ಅಂಶ
ಗಣಿತ, ವಿಜ್ಞಾನ ಹಾಗೂ ಮನಃಶಾಸ್ತ್ರವನ್ನ ಆಧಾರವಾಗಿ ಇಟ್ಟುಕೊಂಡು ಈ ಮ್ಯೂಸಿಯಂನ್ನು ಸ್ಥಾಪಿಸಲಾಗಿದೆ. ಇಲ್ಲಿರುವ ಪ್ರತಿಯೊಂದು ಆಕೃತಿಗಳೂ ನಿಮ್ಮ ಮೆದುಳಿಗೆ ಕೆಲಸ ನೀಡಲಿವೆ. ಅಲ್ಲದೇ ಇಲ್ಲಿ ನಿಮಗೆ ಬಗೆ ಬಗೆಯ ಫೋಟೋಗಳನ್ನ ಕ್ಲಿಕ್ಕಿಸಿಕೊಳ್ಳೋಕೂ ಅವಕಾಶ ನೀಡಲಾಗಿದೆ.