ಅಚ್ಚರಿಗೊಳಿಸುತ್ತೆ ಕೊರೊನಾ ಲಸಿಕೆ ಕುರಿತು ಗೂಗಲ್ ನಲ್ಲಿ ಭಾರತೀಯರು ಹುಡುಕಿರುವ ಸಂಗತಿ…! 19-01-2021 6:32AM IST / No Comments / Posted In: Corona, Corona Virus News, Latest News, India ಕೊರೊನಾ ವಿರುದ್ಧ ಈ ವರ್ಷದಿಂದ ಹೊಸ ಯುದ್ಧವನ್ನ ಆರಂಭಿಸಿರುವ ಭಾರತ ಜನವರಿ 16ರಿಂದ ಕೊರೊನಾ ವ್ಯಾಕ್ಸಿನೇಷನ್ ಡ್ರೈವ್ ಆರಂಭಿಸಿದೆ. ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗ್ತಿದೆ. ದೆಹಲಿ ಏಮ್ಸ್ನ ಪೌರ ಕಾರ್ಮಿಕ ಮನೀಷ್ ಕುಮಾರ್ ದೇಶದಲ್ಲೇ ಮೊದಲ ಬಾರಿಗೆ ಲಸಿಕೆ ಪಡೆದ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇಡೀ ದೇಶದಲ್ಲಿ ಕೊರೊನಾ ಲಸಿಕೆ ಪರ್ವ ಆರಂಭವಾಗಿರುವ ಬೆನ್ನಲ್ಲೇ ಬಹುತೇಕ ಭಾರತೀಯರು ಗೂಗಲ್ನಲ್ಲಿ ಮನೆಯಲ್ಲೇ ಕೊರೊನಾ ಲಸಿಕೆ ತಯಾರು ಮಾಡೋದು ಹೇಗೆ ಎಂದು ಸರ್ಚ್ ಮಾಡಿದ್ದಾರೆ. ಗೂಗಲ್ ನೀಡಿರುವ ಮಾಹಿತಿ ಪ್ರಕಾರ ಭಾರತೀಯರು ರವಿವಾರ ಹಾಗೂ ಸೋಮವಾರ ಮನೆಯಲ್ಲೇ ಕೊರೊನಾ ಲಸಿಕೆ ತಯಾರಿಸೋದು ಹೇಗೆ ಎಂದು ಹೆಚ್ಚಾಗಿ ಸರ್ಚ್ ಮಾಡಿದ್ದಾರಂತೆ. ಅಂದಹಾಗೆ ಈ ಪ್ರಶ್ನೆಗೆ ಉತ್ತರ ನೀವು ಮನೆಯಲ್ಲಿ ಕೊರೊನಾ ಲಸಿಕೆ ತಯಾರು ಮಾಡೋಕೆ ಸಾಧ್ಯಾನೇ ಇಲ್ಲ. ಕೊರೊನಾ ವಿರುದ್ಧ ಪಣ ತೊಟ್ಟಿರುವ ಕೇಂದ್ರ ಸರ್ಕಾರ ದೇಶದಲ್ಲಿ ಕೋವಿಶೀಲ್ಡ್ ಹಾಗೂ ಕೋ ವ್ಯಾಕ್ಸಿನ್ ಎಂಬ ಎರಡು ಲಸಿಕೆಗಳ ಬಳಕೆಗೆ ತುರ್ತು ಅನುಮೋದನೆ ನೀಡಿದೆ. ಈ ಎರಡೂ ಲಸಿಕೆಗಳು ಎರಡು ಡೋಸ್ಗಳ ಮೂಲಕ ಸ್ವೀಕರಿಸಬೇಕು. ಹಾಗೂ ಎರಡು ಡೋಸ್ಗಳ ನಡುವಿನ ಅಂತರ ಕನಿಷ್ಟ 28 ದಿನ ಇರಬೇಕೆಂದು ವೈದ್ಯರು ಹೇಳಿದ್ದಾರೆ.