ಮಹಾರಾಷ್ಟ್ರದ ತಡೋಬಾ ರಾಷ್ಟ್ರೀಯ ಅಭಯಾರಣ್ಯದಲ್ಲಿ ಅತ್ಯಪರೂಪದ ಕಪ್ಪು ಚಿರತೆಯ ಚಿತ್ರಗಳನ್ನು ಸೆರೆ ಹಿಡಿದಿದ್ದ ಛಾಯಾಗ್ರಾಹಕ ಅನುರಾಗ್ ಗಾವಂಡೆ ಭಾರೀ ಫೇಮಸ್ ಆಗಿದ್ದರು.
ಚಿರತೆಯು ಜಿಂಕೆಯೊಂದನ್ನು ಬೇಟೆಯಾಡುತ್ತಿದ್ದ ಸಂದರ್ಭದಲ್ಲಿ ಈ ಚಿತ್ರಗಳನ್ನು ಸೆರೆ ಹಿಡಿದಿದ್ದರು 24 ವರ್ಷದ ಗವಾಂಡೆ.
ಮದುವೆ ನಿಲ್ಲಲು ಕಾರಣಳಾಗಿದ್ದವಳ ವಿರುದ್ದ ವಿಚಿತ್ರ ರೀತಿಯಲ್ಲಿ ಸೇಡು ತೀರಿಸಿಕೊಂಡ ಯುವತಿ
ಕೆಲ ದಿನಗಳ ಹಿಂದೆ ಇದೇ ಚಿರತೆಯನ್ನು ಇನ್ನೊಮ್ಮೆ ಕಂಡ ಗವಾಂಡೆ, ಈ ಬಾರಿ ಅದರ ಇನ್ನಷ್ಟು ಚಿತ್ರಗಳೊಂದಿಗೆ ವಿಡಿಯೋವನ್ನೂ ಸೆರೆ ಹಿಡಿದಿದ್ದಾರೆ. ಅಭಯಾರಣ್ಯದ ರಸ್ತೆಯೊಂದನ್ನು ದಾಟುತ್ತಾ, ಗವಾಂಡೆರ ಕ್ಯಾಮೆರಾವನ್ನು ಚಿರತೆ ನೋಡುತ್ತಿರುವುದನ್ನು ಕಾಣಬಹುದಾಗಿದೆ. ಈ ವೇಳೆ ಚಿರತೆಯು ಗವಾಂಡೆ ಅವರಿಂದ ಕೇವಲ 30 ಅಡಿ ದೂರದಲ್ಲಿ ಇತ್ತು.