ಲಡಾಖ್ನ ಎಲ್ಎಸಿಯಲ್ಲಿ ಭಾರತ ಹಾಗೂ ಚೀನಾ ಪಡೆಗಳ ನಡುವೆ ನಡೆಯುತ್ತಿರುವ ಭಿನ್ನಾಭಿಪ್ರಾಯಗಳ ನಡುವೆ ಬೀಜಿಂಗ್ನ ಆಕ್ರಮಣ ತಡೆಗಟ್ಟುವಲ್ಲಿ ಭಾರತೀಯ ನೌಕಾಪಡೆ ಮಹತ್ವದ ಪಾತ್ರ ವಹಿಸಿದೆ ಅಂತಾ ಭಾರತೀಯ ನೌಕಾಪಡೆಯ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.
ನೌಕಾಪಡೆಯು ಒಂದು ಮೂಕ ಸೇವೆಯಾಗಿದೆ. ನೌಕಾಸೇನೆಯಲ್ಲಿ ಏನೇನಾಗುತ್ತೆ ಅನ್ನೋದು ಯಾರಿಗೂ ತಿಳಿದಿಲ್ಲ. ಬೀಜಿಂಗ್ನ ಆಕ್ರಮಣ ತಡೆಯುವಲ್ಲಿ ಭಾರತೀಯ ನೌಕಾಪಡೆ ಪ್ರಮುಖ ಪಾತ್ರ ವಹಿಸಿದೆ.
ಚೀನಾ ಸೇರಿದಂತೆ ವಿವಿಧ ಕಡಲ ಪ್ರದೇಶಗಳಲ್ಲಿ ದೇಶದ ಮೇಲೆ ಎದುರಾಗಬಲ್ಲ ಎಲ್ಲಾ ಆಕ್ರಮಣಕ್ಕೆ ನೌಕಾಪಡೆ ಸಮರ್ಥವಾಗಿ ಕಡಿವಾಣ ಹಾಕುತ್ತದೆ ಎಂದು ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ಹೇಳಿದ್ದಾರೆ.
ಚೀನಾದ ಚಟುವಟಿಕೆಗಳನ್ನ ಪತ್ತೆ ಮಾಡಲು ಭಾರತೀಯ ನೌಕಾಪಡೆ ಡ್ರೋನ್ಗಳನ್ನ ಎಲ್ಎಸಿಯಲ್ಲಿ ನಿಯೋಜಿಸಲಾಗಿದೆ ಅಂತಾನೂ ಅವರು ಹೇಳಿದ್ರು.