alex Certify ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಕುರಿತು ಭಾರತೀಯ ಜ್ಯೋತಿಷಿಯಿಂದ ಭವಿಷ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಕುರಿತು ಭಾರತೀಯ ಜ್ಯೋತಿಷಿಯಿಂದ ಭವಿಷ್ಯ

Indian Astrologer Predicts Donald Trump's Victory with 'Jupiter and Sun' in His Favour

ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಹೋರಾಟವು ಅಂತಿಮ ಹಂತದಲ್ಲಿದೆ. ಕೊರೊನಾ ಬಿಕ್ಕಟ್ಟಿನಿಂದಾಗಿ ಈ ಬಾರಿ ಚುನಾವಣೆ ಕಾವು ತುಸು ಹೆಚ್ಚಾಗಿದೆ. ಡೊನಾಲ್ಡ್ ಟ್ರಂಪ್​ ಹಾಗೂ ಜೋ ಬಿಡೆನ್​ ನಡುವೆ ಈ ಬಾರಿ ಯಾರಿಗೆ ವಿಜಯದ ಮಾಲೆ ಸಿಗಲಿದೆ ಅನ್ನೋ ಕುತೂಹಲಕ್ಕೆ ಇನ್ನೇನು ಕೆಲವೇ ದಿನಗಳಲ್ಲಿ ತೆರೆ ಬೀಳಲಿದೆ.

ಕೊರೊನಾ ವೈರಸ್​ನ್ನ ಲಘುವಾಗಿ ಪರಿಗಣಿಸಿದ ಕಾರಣಕ್ಕೆ ಟ್ರಂಪ್​ ಅಮೆರಿಕನ್ನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಹೀಗಾಗಿ ಈ ಬಾರಿ ಅಧ್ಯಕ್ಷ ಗಾದಿ ಪಡೆಯುವುದು ಟ್ರಂಪ್​ಗೆ ಅಷ್ಟೊಂದು ಸಲೀಸಾಗಿಲ್ಲ. ಆದರೆ ಭಾರತೀಯ ಮೂಲದ ಜ್ಯೋತಿಷಿಯೊಬ್ಬರು ಟ್ರಂಪ್​ ಎರಡನೇ ಬಾರಿಗೆ ಅಮೆರಿಕದ ಅಧ್ಯಕ್ಷರಾಗ್ತಾರೆ ಅಂತಾ ಭವಿಷ್ಯ ನುಡಿದಿದ್ದಾರೆ.

ಡೊನಾಲ್ಡ್​ ಟ್ರಂಪ್​ರ ರಾಶಿ ಅನುಗುಣವಾಗಿ ಅವರಿಗೆ 10ನೇ ಮನೆಯಲ್ಲಿ ಸೂರ್ಯ ಇದ್ದು, ಅದು ಟ್ರಂಪ್​ಗೆ ಎರಡನೇ ಬಾರಿಗೆ ಅಧ್ಯಕ್ಷ ಸ್ಥಾನ ದಕ್ಕಿಸಿಕೊಡುವಲ್ಲಿ ನೆರವಾಗುತ್ತೆ ಅಂತಾ ಭವಿಷ್ಯ ಹೇಳಿದ್ದಾರೆ. ಆದರೆ ಟ್ರಂಪ್​ ನಿಜವಾದ ಭವಿಷ್ಯ ಏನಾಗುತ್ತೆ ಅನ್ನೋ ಪ್ರಶ್ನೆಗೆ ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...