ಭಾರತೀಯ ನೌಕಾಪಡೆಗೆ ಆರು ಸಬ್ ಮರೀನ್ ಖರೀದಿಗೆ 55 ಸಾವಿರ ಕೋಟಿ ರೂ. ಮೌಲ್ಯದ ಪ್ರಕ್ರಿಯೆ ಆರಂಭಿಸಲು ರಕ್ಷಣಾ ಇಲಾಖೆ ಸಜ್ಜಾಗಿದೆ.
ಚೀನಾದ ಮುಂದೆ ನೌಕಾಪಡೆಯಲ್ಲಿ ಹಿಂದಿರುವ ಭಾರತ, ಇದನ್ನು ಸರಿದೂಗಿಸಲು ಈ ಮೊತ್ತವನ್ನು ಖರ್ಚು ಮಾಡಲು ಸಜ್ಜಾಗಿದೆ. ಈ ಎಲ್ಲ ಸಬ್ ಮರೀನ್‌ಗಳನ್ನು ಭಾರತದಲ್ಲಿಯೇ ತಯಾರಿಸಲು ನಿರ್ಧರಿಸಿದ್ದು, ಇದಕ್ಕೆ ಪೂರಕವಾಗಿಯೇ ಟೆಂಡರ್ ಪ್ರಕ್ರಿಯೆ ನಡೆಯಲಿದೆ ಎಂದು ಹೇಳಲಾಗಿದೆ.
ಮೇಕ್ ಇನ್ ಇಂಡಿಯಾ ಯೋಜನೆಯಲ್ಲಿಯೇ ಈ ಸಬ್ ಮರೀನ್‌ಗಳನ್ನು ತಯಾರಿಸಲು ಸಿದ್ಧವಾಗಿರುವ ರಕ್ಷಣಾ ಇಲಾಖೆ, ಇದಕ್ಕೆ p-751ಎಂದು ಹೆಸರಿಟ್ಟಿದೆ. ಮೂಲಗಳ ಪ್ರಕಾರ ಈಗಾಗಲೇ ಟೆಂಡರ್‌ಗೆ ಅಗತ್ಯ ತಯಾರಿ ಆರಂಭಿಸಲಾಗಿದೆ. ಇದರೊಂದಿಗೆ ಎರಡು ಹಡಗು ತಾಣ ಹಾಗೂ ಐದು ವಿದೇಶಿ ಕಂಪನಿಗಳನ್ನು ಶಾರ್ಟ್ ಲಿಸ್ಟ್ ಗೊಳಿಸಲಾಗಿದೆ ಎಂದು ಹೇಳಲಾಗಿದೆ.