ಭಾರತದ ಸೀರಮ್ ಇನ್ಸ್ಟಿಟ್ಯೂಟ್ ತಯಾರು ಮಾಡ್ತಿರುವ ಆಕ್ಸ್ಫರ್ಡ್ ಕೊರೊನಾ ಲಸಿಕೆ ಡಿಸೆಂಬರ್ ತಿಂಗಳ ಆರಂಭ ಅಥವಾ 2021ರ ಮೂರನೇ ತ್ರೈಮಾಸಿಕದ ವೇಳೆಗೆ 100 ಮಿಲಿಯನ್ ಡೋಸ್ಗಳ ಮೊದಲ ಬ್ಯಾಚ್ ತಯಾರಾಗಬಹುದು ಅಂತಾ ಪುಣೆ ಮೂಲದ ಕಂಪನಿ ಮುಖ್ಯಸ್ಥ ಆದತ್ ಪೂನಾವಾಲ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಾವು ತುರ್ತು ಪರವಾನಗಿ ಪಡೆಯದೇ ಇದ್ದರೆ, ಡಿಸೆಂಬರ್ ವೇಳೆಗೆ ನಮ್ಮ ಪ್ರಯೋಗಗಳೆಲ್ಲ ಯಶಸ್ವಿಯಾಗಬೇಕು ಹಾಗೂ ಜನವರಿ ವೇಳೆಗೆ ನಮ್ಮ ದೇಶದಲ್ಲಿ ಕೊರೊನಾ ಲಸಿಕೆ ಪ್ರಾರಂಭವಾಗಬಹುದು ಅಂತಾ ಹೇಳಿದ್ದಾರೆ.
ಮುಂದಿನ ಎರಡು ವಾರಗಳಲ್ಲಿ ಯುಕೆಯ ಜೊತೆ ಲಸಿಕೆ ಸಂಬಂಧ ಕೈಗೊಳ್ಳಲಾದ ಅಧ್ಯಯನಗಳ ಮಾಹಿತಿಯನ್ನ ಹಂಚಿಕೊಳ್ಳಲಿದ್ದೇವೆ. ಈ ಎಲ್ಲಾ ಮಾಹಿತಿ ಸುರಕ್ಷಿತವಾಗಿದೆ ಅಂದರೆ ಲಸಿಕೆಯನ್ನ ಬಳಕೆ ಮಾಡಲು ತುರ್ತು ಪರವಾನಿಗೆ ಬೇಕು ಅಂತಾ ಅರ್ಜಿ ಸಲ್ಲಿಕೆ ಮಾಡಬಹುದು ಅಂತಾ ಅಭಿಪ್ರಾಯಪಟ್ಟಿದ್ದಾರೆ.