alex Certify ಭಾರತದಲ್ಲಿನ ಅತ್ಯಾಚಾರ ಪ್ರಕರಣಗಳ ಕುರಿತು ಶಾಕಿಂಗ್ ಮಾಹಿತಿ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದಲ್ಲಿನ ಅತ್ಯಾಚಾರ ಪ್ರಕರಣಗಳ ಕುರಿತು ಶಾಕಿಂಗ್ ಮಾಹಿತಿ ಬಹಿರಂಗ

ನವದೆಹಲಿ: ಹಾಥರಸ್ ಗ್ಯಾಂಗ್ ರೇಪ್ ಪ್ರಕರಣ ಮಹಿಳೆಯರ ಸುರಕ್ಷತೆಯ ಬಗ್ಗೆ ದೇಶದಲ್ಲಿ ಪ್ರಶ್ನೆ ಹುಟ್ಟು ಹಾಕಿದೆ. ಇದು ದೇಶದಲ್ಲಿ ಮೊದಲಲ್ಲ. 2012 ರಲ್ಲಿ ದೆಹಲಿಯಲ್ಲಿ ನಿರ್ಭಯಾ ಗ್ಯಾಂಗ್ ರೇಪ್, 2017 ರಲ್ಲಿ ಉನ್ನಾವ್ ರೇಪ್, 2018 ರಲ್ಲಿ ಕಾತಾವ್ ರೇಪ್ ಕೇಸ್, 2019 ರಲ್ಲಿ ಹೈದ್ರಾಬಾದ್ ನಲ್ಲಿ ವೈದ್ಯೆಯ ರೇಪ್ ಮತ್ತು ಮರ್ಡರ್ ಕೇಸ್ ಹೀಗೆ…..ಒಂದಲ್ಲ ಎರಡಲ್ಲ. ಥಾಮಸ್ ರಿಚರ್ಸ್ ಫೌಂಡೇಶನ್ ನಡೆಸಿದ‌ ಅಧ್ಯಯನವೊಂದರಲ್ಲಿ ಭಾರತ‌ ಮಹಿಳೆಯರಿಗೆ ಅತಿ ಅಸುರಕ್ಷಿತ ಎಂದು ಹೇಳಲಾಗಿದೆ.‌

ರಾಷ್ಟ್ರೀಯ ಅಪರಾಧ ದಾಖಲೀಕರಣ (ಎನ್.ಸಿ.ಆರ್.ಬಿ.) ಮಾಹಿತಿಯಂತೆ ದೇಶದಲ್ಲಿ 2019 ರಲ್ಲಿ 32,033 ಅತ್ಯಾಚಾರ ಪ್ರಕರಣಗಳು ನಡೆದಿವೆ. ಅದನ್ನು ವಿಭಾಗಿಸಿದಾಗ ದಿನಕ್ಕೆ ಸರಾಸರಿ 88 ರೇಪ್ ದೇಶದಲ್ಲಿ ದಾಖಲಾಗುತ್ತದೆ.

2019 ರಲ್ಲಿ ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಎಂದರೆ, 59,853 ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು, ರಾಜಸ್ತಾನದಲ್ಲಿ 41,550, ಮಹಾರಾಷ್ಟ್ರದಲ್ಲಿ 37,144 ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಅದರಲ್ಲಿ ರಾಜಸ್ತಾನದಲ್ಲಿ 6 ಸಾವಿರ, ಉತ್ತರ ಪ್ರದೇಶದಲ್ಲಿ 3 ಸಾವಿರ ಅತ್ಯಾಚಾರ ಪ್ರಕರಣಗಳು ನಡೆದಿವೆ ಎಂದು ವರದಿ ಹೇಳುತ್ತದೆ.

ಆದರೆ, ಈ ಅತ್ಯಾಚಾರ ಪ್ರಕರಣಗಳಲ್ಲಿ 2018 ಹಾಗೂ 2019 ರಲ್ಲಿ ಶೇ.30 ರಷ್ಟು ಮಾತ್ರ ಶಿಕ್ಷೆಯಾಗಿದೆ ಎಂದು ವರದಿ ಹೇಳುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...