alex Certify ದೇಶದಲ್ಲಿ ನಿಲ್ಲದ ಕೊರೊನಾ ಆರ್ಭಟ: 24 ಗಂಟೆಗಳಲ್ಲಿ 70 ಸಾವಿರಕ್ಕೂ ಅಧಿಕ ಕೋವಿಡ್​ ಕೇಸ್​​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇಶದಲ್ಲಿ ನಿಲ್ಲದ ಕೊರೊನಾ ಆರ್ಭಟ: 24 ಗಂಟೆಗಳಲ್ಲಿ 70 ಸಾವಿರಕ್ಕೂ ಅಧಿಕ ಕೋವಿಡ್​ ಕೇಸ್​​

ದೇಶದಲ್ಲಿ ಬುಧವಾರ 70 ಸಾವಿರ ಹೊಸ ಕೊರೊನಾ ಕೇಸ್​ಗಳು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 72,330 ಹೊಸ ಕೊರೊನಾ ಕೇಸ್​ಗಳು ಹಾಗೂ 459 ಸಾವು ವರದಿಯಾಗಿದೆ. ಇದು ಡಿಸೆಂಬರ್​ 5ರ ಬಳಿಕ ವರದಿಯಾದ ಅತಿ ಹೆಚ್ಚಿನ ಸಂಖ್ಯೆಯ ಕೇಸ್​ ಆಗಿದೆ. ಇದರಲ್ಲಿ 39,544 ಕೇಸ್​ಗಳು ಮಹಾರಾಷ್ಟ್ರದಲ್ಲಿ ವರದಿಯಾಗಿದೆ. ಚತ್ತೀಸಗಢದಲ್ಲಿ ಇದೇ ಮೊದಲ ಬಾರಿಗೆ 4563 ಕೊರೊನಾ ಕೇಸ್​ ದಾಖಲಾಗಿದೆ. ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 4000 ಮಂದಿಯ ವರದಿ ಪಾಸಿಟಿವ್​ ಬಂದಿದೆ.
ಕಳೆದ 24 ಗಂಟೆಗಳಲ್ಲಿ 459 ಮಂದಿ ಕೊರೊನಾದಿಂದ ಸಾವಿಗೀಡಾಗಿದ್ದು ಈ ಮೂಲಕ ದೇಶದಲ್ಲಿ ಒಟ್ಟು ಸಾವಿಗೀಡಾದವರ ಸಂಖ್ಯೆ 1,62,927 ಆಗಿದೆ. ದೇಶದಲ್ಲಿ ಪ್ರಸ್ತುತ 5,84,055 ಸಕ್ರಿಯ ಕೇಸ್​ಗಳಿವೆ.

ಮಹಾರಾಷ್ಟ್ರದಲ್ಲಿ 243, ಪಂಜಾಬ್​ನಲ್ಲಿ 55, ಚತ್ತೀಸಗಢದಲ್ಲಿ 39, ಕರ್ನಾಟಕದಲ್ಲಿ 26 ಹಾಗೂ ತಮಿಳುನಾಡಿನಲ್ಲಿ ಕಳೆದ 24 ಗಂಟೆಗಳಲ್ಲಿ 19 ಮಂದಿ ಕೊರೊನಾದಿಂದಾ ಸಾವಿಗೀಡಾಗಿದ್ದಾರೆ. 14 ರಾಜ್ಯಗಳಲ್ಲಿ ಬುಧವಾರ ಕೊರೊನಾ ಸಾವಿನ ವರದಿಯಾಗಿಲ್ಲ. ಬುಧವಾರ ದೇಶದಲ್ಲಿ 40382 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ದೇಶದಲ್ಲಿ ಕೊರೊನಾದಿಂದ ಗುಣಮುಖರಾದವರ ಸಂಖ್ಯೆ 1,14,74,683ಕ್ಕೆ ಏರಿಕೆಯಾಗಿದೆ.

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ನೀಡಿರುವ ಮಾಹಿತಿಯ ಪ್ರಕಾರ 31 ಮಾರ್ಚ್​ವರೆಗೆ ದೇಶದಲ್ಲಿ ಒಟ್ಟು 24,47,98,621 ಸ್ಯಾಂಪಲ್​ಗಳನ್ನ ಪರೀಕ್ಷೆಗೆ ಒಳಪಡಿಸಲಾಗಿದೆ, ಇದರಲ್ಲಿ 11,25,681 ಸ್ಯಾಂಪಲ್​ಗಳನ್ನ ನಿನ್ನೆ ಪರೀಕ್ಷೆಗೆ ಒಳಪಡಿಸಲಾಗಿತ್ತು.

ಇನ್ನು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ ನೀಡಿರುವ ಮಾಹಿತಿಯ ಪ್ರಕಾರ ದೇಶದಲ್ಲಿ ಈವರೆಗೆ ಒಟ್ಟು 6,51,17,896 ಮಂದಿ ಕೊರೊನಾ ಲಸಿಕೆ ಪಡೆದಿದ್ದಾರೆ. ಇಂದಿನಿಂದ ಸರ್ಕಾರ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೊರೊನಾ ಲಸಿಕೆ ನೀಡುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...
Сырой спаржа: все, что вам нужно знать Expert na výživu Zdravý produkt pro srdce Jak zvýšit odolnost vůči stresu: Potraviny, které zničí Spermie lososů Zdravotní mentor vysvětluje, jak Zdraví mozku: Objeveny nejlepší potraviny pro udržení Je možné zhubnout pomalým jídlem? Odborník 5 potravin, které byste neměli jíst k Lékař varoval Zdravá Návrhář Zmrazené 5 špatných kombinací jídla s pohankou, které Co Terapeut vysvětlil, Potraviny, 1. Lékaři varují: Vařená vejce by se s Jak udržet zdravý mozek: rady terapeuta 6 potravin, které Jak postupovat po ukousnutí jedovatým pavoukem: rady 4 hlavní pravidla pro 10 produktů, které vám pomohou rychle Jak správně pozorovat Jaké plavky mohou Doplňující doporučení lékařů ohledně vyřazení Proč je důležité nevynechávat Proč byste měli Benefity pravidelné konzumace Březová Jak správně skladovat Odborníci vysvětlují, proč byste neměli přehánět s Jaké potraviny obsahují Odborník na Limit kyseliny mléčné v 6 bílkovinových potravin pro hubnutí bez hladu Doktor