ರೈತ ಪ್ರತಿಭಟನೆ ಸಂಬಂಧ ತಪ್ಪು ಮಾಹಿತಿಗಳನ್ನ ಹರಡುತ್ತಿರುವ ಸಾವಿರಕ್ಕೂ ಹೆಚ್ಚು ಟ್ವಿಟರ್ ಖಾತೆಗಳನ್ನ ತೆಗೆದು ಹಾಕುವಂತೆ ಕೇಂದ್ರ ಸರ್ಕಾರ ಮೈಕ್ರೋಬ್ಲಾಗಿಂಗ್ ಫ್ಲ್ಯಾಟ್ಫಾರಂ ಟ್ವಿಟರ್ಗೆ ಸೂಚನೆ ನೀಡಿದೆ. ಇದರಲ್ಲಿ 1178 ಖಾತೆಗಳು ಪಾಕಿಸ್ತಾನ ಹಾಗೂ ಖಲಿಸ್ತಾನಕ್ಕೆ ಸೇರಿದ್ದಾಗಿದೆ ಎಂದು ಸಚಿವಾಲಯ ಹೇಳಿದೆ.
ಫೆಬ್ರವರಿ ನಾಲ್ಕರಂದು ರೈತರ ಪ್ರತಿಭಟನೆ ಬಗ್ಗೆ ಸುಳ್ಳು ಮಾಹಿತಿಗಳನ್ನ ಹರಡುತ್ತಿರುವ ಪಾಕಿಸ್ತಾನಿ ಬೆಂಬಲ ಹೊಂದಿರುವ ಖಲಿಸ್ತಾನದ ಟ್ವಿಟರ್ ಖಾತೆಗಳನ್ನ ಮಾಹಿತಿ ಹಾಗೂ ತಂತ್ರಜ್ಞಾನ ಸಚಿವಾಲಯ ಲಿಸ್ಟ್ ಮಾಡಿತ್ತು.
SHOCKING: ಕೊರೊನಾದಿಂದ ಗುಣಮುಖರಾದ ಹಲವರಲ್ಲಿ ಕಂಡು ಬರುತ್ತಿದೆ ಈ ಸಮಸ್ಯೆ…!
ಜನವರಿ 31ನೇ ತಾರೀಖಿನಂದು ಇದೇ ಕಾರಣಕ್ಕೆ 257 ಟ್ವಿಟರ್ ಖಾತೆಗಳನ್ನ ಟ್ವಿಟರ್ ಇಂಡಿಯಾ ನಿರ್ಬಂಧಿಸಿತ್ತು.