ಪೊಲೀಸ್ ಪಡೆಗಳಲ್ಲಿ ಮಹಿಳೆಯರನ್ನು ನೇಮಕ ಮಾಡಿಕೊಳ್ಳುವ ವಿಚಾರದಲ್ಲಿ ಮುಂಚೂಣಿಯಲ್ಲಿರುವ ಬಿಹಾರ, ತನ್ನ ಕಾನೂನು ಪಾಲನಾ ಪಡೆಯ ಸಿಬ್ಬಂದಿಯ 25.3% ರಷ್ಟು ಮಹಿಳೆಯರನ್ನು ಹೊಂದಿದೆ.
ಇಂಡಿಯಾ ಜಸ್ಟಿಸ್ ಸಮೀಕ್ಷೆಯ ವರದಿ ಪ್ರಕಾರ, ಇದೇ ವಿಷಯದಲ್ಲಿ ಹಿಮಾಚಲ ಪ್ರದೇಶ (19.2%) ಹಾಗೂ ತಮಿಳುನಾಡು (18.5%) ರಾಜ್ಯಗಳು ಇವೆ.
ಇದೇ ವೇಳೆ ಅತ್ಯಧಿಕ ಪ್ರಮಾಣದಲ್ಲಿ ಮಹಿಳಾ ಪೊಲೀಸ್ ಅಧಿಕಾರಿಗಳನ್ನು ಹೊಂದಿರುವ ರಾಜ್ಯಗಳ ಪೈಕಿ ತಮಿಳುನಾಡು (24.8%) ಮುಂದೆ ಇದೆ. ಇದೇ ಪಟ್ಟಿಯಲ್ಲಿ ಮಿಜೋರಾಂ (20.1%) ನಂತರದ ಸ್ಥಾನದಲ್ಲಿದೆ.
ಮಗಳ ಮುಂದೆಯೇ ಫೇಸ್ಬುಕ್ ಸ್ನೇಹಿತನಿಂದ ಹತ್ಯೆಗೀಡಾದ ಮಹಿಳೆ: ಸಿಸಿ ಟಿವಿಯಲ್ಲಿ ಎದೆ ನಡುಗಿಸುವ ದೃಶ್ಯ ಸೆರೆ
ಇದೇ ವೇಳೆ ಪೊಲೀಸ್ ಪಡೆಯಲ್ಲಿ ಎಸ್‌ಸಿ, ಎಸ್‌ಟಿ, ಒಬಿಸಿ ಕೋಟಾಗಳ ಹುದ್ದೆಗಳನ್ನು ಭರ್ತಿ ಮಾಡುವಲ್ಲಿ ಕರ್ನಾಟಕ ಮುಂದೆ ಇದೆ.
ಹೈಕೋರ್ಟ್‌ಗಳಲ್ಲಿ ಮಹಿಳಾ ನ್ಯಾಯಾಧೀಶೆಯರ ಸಂಖ್ಯೆ ಸಹ ತೀರಾ ಹೇಳಿಕೊಳ್ಳುವ ಮಟ್ಟದಲ್ಲಿ ಏನೂ ಇಲ್ಲ. ತನ್ನ ನ್ಯಾಯಾಧೀಶರ ಪೈಕಿ 33.3 ಪ್ರತಿಶತ ಮಹಿಳೆಯರನ್ನು ಹೊಂದಿರುವ ಸಿಕ್ಕಿಂ ಎಲ್ಲಕ್ಕಿಂತ ಮುಂದೆ ಇದೆ. ದೇಶಾದ್ಯಂತ ಹೈಕೋರ್ಟ್‌ಗಳಲ್ಲಿ ಇರುವ ನ್ಯಾಯಾಧೀಶರ ಪೈಕಿ 29% ಮಂದಿ ಮಹಿಳೆಯರಿದ್ದಾರೆ ಎಂದು ತಿಳಿದು ಬಂದಿದೆ.
ಕನಿಷ್ಠ 1 ಕೋಟಿ ಜನಸಂಖ್ಯೆ ಇರುವ 18 ದೊಡ್ಡ ಹಾಗೂ ಮಧ್ಯಮ ಗಾತ್ರದ ರಾಜ್ಯಗಳಲ್ಲಿ ಸಮೀಕ್ಷೆ ನಡೆಸಲಾಗಿದೆ.