alex Certify ಬೆಚ್ಚಿಬೀಳಿಸುವಂತಿದೆ ʼನಿವಾರ್ʼ​ ಅಬ್ಬರದ ವಿಡಿಯೋ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಚ್ಚಿಬೀಳಿಸುವಂತಿದೆ ʼನಿವಾರ್ʼ​ ಅಬ್ಬರದ ವಿಡಿಯೋ…!

ನಿವಾರ್​ ಚಂಡಮಾರುತವು ತಮಿಳುನಾಡು ಹಾಗೂ ಪುದುಚೆರಿ ಕರಾವಳಿ ಭಾಗದಲ್ಲಿ ಬುಧವಾರ ಭೂಕುಸಿತ ಉಂಟು ಮಾಡುವ ಸಾಧ್ಯತೆ ಇದೆ ಅಂತಾ ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಮುಂದಿನ 12 ಗಂಟೆಗಳಲ್ಲಿ ಪುದುಚೆರಿಯ ಕಾರೈಕಲರ್​ ಹಾಗೂ ತಮಿಳುನಾಡಿನ ಮಾಮಲ್ಲಾಪುರಂನಲ್ಲಿ ಭೂಕುಸಿತ ಉಂಟಾಗೋದ್ರಿಂದ ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರನ್ನ ಸ್ಥಳಾಂತರ ಮಾಡಲಾಗಿದೆ.

ನಿವಾರ್​ ಚಂಡಮಾರುತ ಅತ್ಯಂತ ತೀವ್ರವಾದ ಚಂಡಮಾರುತವಾದ್ದರಿಂದ ಆಂಧ್ರಪ್ರದೇಶದ ಜೊತೆಗೆ ತಮಿಳುನಾಡು ಹಾಗೂ ಪುದುಚೆರಿಯ ಕರಾವಳಿ ತೀರಗಳಿಗೆ ದೊಡ್ಡ ಅಪಾಯವನ್ನ ತಂದೊಡ್ಡಲಿದೆ. ನಿವಾರ್​ 120-130 ಕಿ.ಮೀ ವೇಗದಲ್ಲಿ ಭೂಕುಸಿತ ಉಂಟು ಮಾಡಲಾಗಿದೆ.

ಮೇ ತಿಂಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ಆಂಫಾನ್​ ಸೂಪರ್​ ಸೈಕ್ಲೋನಿಕ್​ ಚಂಡಮಾರುತ ಹಾವಳಿ ಎಬ್ಬಿಸಿದ ಬಳಿಕ ಬಂಗಾಳಕೊಲ್ಲಿಯಲ್ಲಿ ಉಂಟಾದ ಎರಡನೇ ಚಂಡಮಾರುತ ಇದಾಗಿದೆ.

ಮುಂಜಾಗ್ರತಾ ಕ್ರಮವಾಗಿ ಎನ್​ಡಿಆರ್​ಎಫ್​ 30 ತಂಡಗಳನ್ನ ರೂಪಸಿದೆ. ತುರ್ತು ಪರಿಸ್ಥಿತಿಗಾಗಿ ಇನ್ನೂ 20 ತಂಡಗಳನ್ನ ಇರಿಸಲಾಗಿದೆ.

ಇನ್ನು ನೆಟ್ಟಿಗರೂ ಕೂಡ ನಿವಾರ್​​ನಿಂದಾದ ಸಾಕಷ್ಟು ಅನಾಹುತಗಳ ವಿಡಿಯೋಗಳನ್ನ ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡುತ್ತಿದ್ದಾರೆ.

— Unnikrishnan R Santhosh (@realunnikrish) November 24, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...