
ಮುಂದಿನ 12 ಗಂಟೆಗಳಲ್ಲಿ ಪುದುಚೆರಿಯ ಕಾರೈಕಲರ್ ಹಾಗೂ ತಮಿಳುನಾಡಿನ ಮಾಮಲ್ಲಾಪುರಂನಲ್ಲಿ ಭೂಕುಸಿತ ಉಂಟಾಗೋದ್ರಿಂದ ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರನ್ನ ಸ್ಥಳಾಂತರ ಮಾಡಲಾಗಿದೆ.
ನಿವಾರ್ ಚಂಡಮಾರುತ ಅತ್ಯಂತ ತೀವ್ರವಾದ ಚಂಡಮಾರುತವಾದ್ದರಿಂದ ಆಂಧ್ರಪ್ರದೇಶದ ಜೊತೆಗೆ ತಮಿಳುನಾಡು ಹಾಗೂ ಪುದುಚೆರಿಯ ಕರಾವಳಿ ತೀರಗಳಿಗೆ ದೊಡ್ಡ ಅಪಾಯವನ್ನ ತಂದೊಡ್ಡಲಿದೆ. ನಿವಾರ್ 120-130 ಕಿ.ಮೀ ವೇಗದಲ್ಲಿ ಭೂಕುಸಿತ ಉಂಟು ಮಾಡಲಾಗಿದೆ.
ಮೇ ತಿಂಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ಆಂಫಾನ್ ಸೂಪರ್ ಸೈಕ್ಲೋನಿಕ್ ಚಂಡಮಾರುತ ಹಾವಳಿ ಎಬ್ಬಿಸಿದ ಬಳಿಕ ಬಂಗಾಳಕೊಲ್ಲಿಯಲ್ಲಿ ಉಂಟಾದ ಎರಡನೇ ಚಂಡಮಾರುತ ಇದಾಗಿದೆ.
ಮುಂಜಾಗ್ರತಾ ಕ್ರಮವಾಗಿ ಎನ್ಡಿಆರ್ಎಫ್ 30 ತಂಡಗಳನ್ನ ರೂಪಸಿದೆ. ತುರ್ತು ಪರಿಸ್ಥಿತಿಗಾಗಿ ಇನ್ನೂ 20 ತಂಡಗಳನ್ನ ಇರಿಸಲಾಗಿದೆ.
ಇನ್ನು ನೆಟ್ಟಿಗರೂ ಕೂಡ ನಿವಾರ್ನಿಂದಾದ ಸಾಕಷ್ಟು ಅನಾಹುತಗಳ ವಿಡಿಯೋಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿದ್ದಾರೆ.