ಕೊರೊನಾ ಎರಡನೇ ಅಲೆ ಹೆಚ್ಚು ಅಪಾಯಕಾರಿಯಾಗಿದೆ. ಕೊರೊನಾ ಎರಡನೇ ಅಲೆಗೆ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಹಾಗೆ ಹೊಸ ಹೊಸ ಲಕ್ಷಣಗಳು ಕಾಣಿಸಿಕೊಳ್ತಿವೆ. ಸೂರತ್ ನಲ್ಲಿ ಮುಕೊರ್ ಮೈಕೋಸಿಸ್ ಗೆ ತುತ್ತಾಗ್ತಿದ್ದಾರೆ. ಸಕಾಲಿಕ ಚಿಕಿತ್ಸೆ ಕೊರತೆಯಿಂದಾಗಿ ಅನೇಕರು ಕಣ್ಣು ಕಳೆದುಕೊಂಡಿದ್ದರೆ ಕೆಲವರ ಜೀವ ಹೋಗಿದೆ.
ಗುಜರಾತ್‌ನ ಸೂರತ್ ನಗರದಲ್ಲಿ ಕಳೆದ 15 ದಿನಗಳಲ್ಲಿ ಈ ರೋಗದ 40 ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. 8 ರೋಗಿಗಳು ತಮ್ಮ ಕಣ್ಣು ಕಳೆದುಕೊಂಡಿದ್ದಾರೆ. ಮುಕೊರ್ ಮೈಕೋಸಿಸ್ ಒಂದು ರೀತಿಯ ಶಿಲೀಂಧ್ರಗಳ ಸೋಂಕು. ಇದು ಮೂಗು ಮತ್ತು ಕಣ್ಣುಗಳ ಮೂಲಕ ಮೆದುಳನ್ನು ತಲುಪುತ್ತದೆ. ಈ ಸೋಂಕು ತುಂಬಾ ಅಪಾಯಕಾರಿಯಾಗಿದೆ. ಸಮಯಕ್ಕೆ ಸರಿಯಾದ ಚಿಕಿತ್ಸೆ ಸಿಗದೆ ಹೋದಲ್ಲಿ ರೋಗಿ ಸಾಯುತ್ತಾನೆ. ಕೊರೊನಾ ವೈರಸ್ ಸೋಂಕಿನ ಮೊದಲ ಅಲೆಯಲ್ಲಿ ಈ ರೋಗದ ಬಗ್ಗೆ ಯಾವುದೇ ನಿರ್ದಿಷ್ಟ ಮಾಹಿತಿ ಇರಲಿಲ್ಲ.
ಕೆಲವು ರೋಗಿಗಳಿಗೆ ಕೊರೊನಾ ಸೋಂಕಿನ ನಂತರ ಕಣ್ಣು ಅಥವಾ ತಲೆಯಲ್ಲಿ ತೊಂದರೆ ಕಾಣಿಸಿಕೊಳ್ಳುತ್ತದೆ. ಇದನ್ನು ಕಡೆಗಣಿಸಬಾರದು. ಇದು ಸೈನಸ್‌ನಲ್ಲಿ ಮೊದಲು ಕಾಣಿಸಿಕೊಳ್ಳುತ್ತದೆ. ನಂತರ 2 ರಿಂದ 4 ದಿನಗಳಲ್ಲಿ ಕಣ್ಣಿಗೆ ತಲುಪುತ್ತದೆ. ನಂತರ ಮೆದುಳನ್ನು ತಲುಪಲು 24 ಗಂಟೆಗಳು ಬೇಕಾಗುವುದಿಲ್ಲ.
ರೋಗನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಇದ್ರ ಅಪಾಯ ಹೆಚ್ಚು. ತಲೆಯಲ್ಲಿ ಅಸಹನೀಯ ನೋವು, ಕೆಂಪು ಕಣ್ಣುಗಳು, ಕಣ್ಣುಗಳಲ್ಲಿ ತೀಕ್ಷ್ಣವಾದ ನೋವು, ಕಣ್ಣಲ್ಲಿ ನೀರು ಮತ್ತು ಕಣ್ಣಿನಲ್ಲಿ ಯಾವುದೇ ಚಲನೆ ಇಲ್ಲದೆ ಹೋದಲ್ಲಿ ತಕ್ಷಣ ವೈದ್ಯರನ್ನು ಭೇಟಿಯಾಗಬೇಕು.