ತಮಿಳುನಾಡಿನ ಮಧುರೈನ ಉದ್ಯಮಿ ಸೇತುರಾಮ್ ತಮ್ಮ ಪ್ರೀತಿಯ ಮಡದಿಯ ಸವಿನೆನಪಿನಲ್ಲಿ ಅವರ ತದ್ರೂಪು ಎನ್ನಬಹುದಾದ 6 ಅಡಿ ಉದ್ದದ ಪ್ರತಿಮೆಯೊಂದನ್ನು ನಿರ್ಮಿಸಿಕೊಂಡಿದ್ದಾರೆ.
ಸೇತುರಾಮ್ ಪತ್ನಿ ಪಿಚ್ಚೈಮಣಿಯಮ್ಮಾಳ್ ಕಳೆದ ತಿಂಗಳು ಇಹಲೋಕ ತ್ಯಜಿಸಿದ್ದಾರೆ. ಅವರ ನೆನಪನ್ನು ಶಾಶ್ವತವಾಗಿಡಲು ಈ ಪ್ರತಿಮೆಯನ್ನು ಸೃಷ್ಟಿಸಲಾಗಿದೆ. ಫೈಬರ್, ರಬ್ಬರ್ ಹಾಗೂ ಹಲವಾರು ಬಣ್ಣಗಳನ್ನು ಬಳಸಿಕೊಂಡು ಈ ಪ್ರತಿಮೆ ನಿರ್ಮಿಸಲಾಗಿದೆ.
“ನನ್ನ ಮಡದಿ ನನಗೆ ಅತ್ಯಂತ ಪ್ರಿಯಳಾಗಿದ್ದಳು. ಅವಳು ಕಳೆದ ತಿಂಗಳು ನಮ್ಮನ್ನು ಬಿಟ್ಟು ಹೋಗಿದ್ದಾಳೆ. ನಮ್ಮ ಮನೆಯಲ್ಲಿ ಈ ಪ್ರತಿಮೆಯನ್ನು ಇರಿಸಿದ್ದು, ಆಕೆ ಸದಾ ನಮ್ಮೊಂದಿಗೆ ಇರಲಿದ್ದಾಳೆ” ಎಂದು ಸೇತುರಾಮ್ ಹೇಳಿದ್ದಾರೆ.