alex Certify ತವರಿನಿಂದ ಪತಿ ಮನೆಗೆ ಹೊರಟ ಮಗಳಿಗೆ ವಿಶೇಷ ವಿದಾಯ..! ವೈರಲ್​ ಆಯ್ತು ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತವರಿನಿಂದ ಪತಿ ಮನೆಗೆ ಹೊರಟ ಮಗಳಿಗೆ ವಿಶೇಷ ವಿದಾಯ..! ವೈರಲ್​ ಆಯ್ತು ವಿಡಿಯೋ

ಮದುವೆ ಕಾರ್ಯಕ್ರಮ ಅನ್ನೋದು ಒಂದು ಸುಂದರ ಅನುಭವ. ಆದರೆ ಮದುಮಗಳು ಗಂಡನ ಮನೆಗೆ ಹೊರಡುವ ವೇಳೆ ಅಳೋದು ಕಾಮನ್​. ಅಲ್ಲದೇ ಇದೊಂದು ದೃಶ್ಯವನ್ನ ನೋಡೋಕೂ ತುಂಬಾನೆ ಕಷ್ಟ ಎನಿಸುತ್ತೆ.

ಆದರೆ ಈಗ ಕಾಲ ಬದಲಾಗಿದೆ. ಈಗ ಮಂಟಪದಿಂದ ಗಂಡನ ಮನೆಗೆ ಹೋಗುವ ಮುನ್ನ ಅಳುವ ಹೆಣ್ಮಕ್ಕಳು ಸಿಗೋದೇ ಕಷ್ಟ. ಇಂತಹದ್ದೇ ಒಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಸ್ನೇಹಾ ಸಿಂಘಿ ಉಪಾಧ್ಯಾಯ ಎಂಬಾಕೆ ಈ ವಿಡಿಯೋದಲ್ಲಿರುವ ನವವಿವಾಹಿತೆ ಆಗಿದ್ದಾರೆ. ವಿಡಿಯೋದಲ್ಲಿ ಸ್ನೇಹಾ ಪತಿಯ ಜೊತೆಗೆ ಮಂಟಪದಿಂದ ತೆರಳುವ ವೇಳೆ ಕಣ್ಣೀರು ಹಾಕೋದಿಲ್ಲ. ಬದಲಾಗಿ ಆಕೆಯೇ ಕಾರಿನ ಡ್ರೈವಿಂಗ್​ ಸೀಟಿನಲ್ಲಿ ಕೂತು ಕಾರನ್ನ ಡ್ರೈವ್​ ಮಾಡಿದ್ದಾಳೆ.

ಸ್ನೇಹಾಳ ಪತಿ ಆಕೆಯ ಪಕ್ಕದ ಸೀಟಿನಲ್ಲಿ ಕೂರುತ್ತಾರೆ. ಈ ವಿಡಿಯೋವನ್ನ ಶೇರ್​ ಮಾಡಿರುವ ಸ್ನೇಹಾ, ನಿಜಕ್ಕೂ ಇದು ಮಜವಾಗಿತ್ತು. ಈ ವಿಡಿಯೋ ನೋಡಿದ ಎಲ್ಲರೂ ಖುಷಿಯಾಗಿದ್ರು. ಪತಿಯ ಮನೆಗೆ ಹೋಗ್ತಾ ಕಣ್ಣೀರಾಕುವ ಕಾಲ ಮುಗೀತು. ಈಗ ಹೊಸ ಜಮಾನಾದ ಹೆಣ್ಣುಮಕ್ಕಳು ಬಂದಾಗಿದೆ ಎಂದು ಶೀರ್ಷಿಕೆ ನೀಡಿದ್ದಾರೆ.

 

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...