
ಮದುವೆ ಕಾರ್ಯಕ್ರಮ ಅನ್ನೋದು ಒಂದು ಸುಂದರ ಅನುಭವ. ಆದರೆ ಮದುಮಗಳು ಗಂಡನ ಮನೆಗೆ ಹೊರಡುವ ವೇಳೆ ಅಳೋದು ಕಾಮನ್. ಅಲ್ಲದೇ ಇದೊಂದು ದೃಶ್ಯವನ್ನ ನೋಡೋಕೂ ತುಂಬಾನೆ ಕಷ್ಟ ಎನಿಸುತ್ತೆ.
ಆದರೆ ಈಗ ಕಾಲ ಬದಲಾಗಿದೆ. ಈಗ ಮಂಟಪದಿಂದ ಗಂಡನ ಮನೆಗೆ ಹೋಗುವ ಮುನ್ನ ಅಳುವ ಹೆಣ್ಮಕ್ಕಳು ಸಿಗೋದೇ ಕಷ್ಟ. ಇಂತಹದ್ದೇ ಒಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸ್ನೇಹಾ ಸಿಂಘಿ ಉಪಾಧ್ಯಾಯ ಎಂಬಾಕೆ ಈ ವಿಡಿಯೋದಲ್ಲಿರುವ ನವವಿವಾಹಿತೆ ಆಗಿದ್ದಾರೆ. ವಿಡಿಯೋದಲ್ಲಿ ಸ್ನೇಹಾ ಪತಿಯ ಜೊತೆಗೆ ಮಂಟಪದಿಂದ ತೆರಳುವ ವೇಳೆ ಕಣ್ಣೀರು ಹಾಕೋದಿಲ್ಲ. ಬದಲಾಗಿ ಆಕೆಯೇ ಕಾರಿನ ಡ್ರೈವಿಂಗ್ ಸೀಟಿನಲ್ಲಿ ಕೂತು ಕಾರನ್ನ ಡ್ರೈವ್ ಮಾಡಿದ್ದಾಳೆ.
ಸ್ನೇಹಾಳ ಪತಿ ಆಕೆಯ ಪಕ್ಕದ ಸೀಟಿನಲ್ಲಿ ಕೂರುತ್ತಾರೆ. ಈ ವಿಡಿಯೋವನ್ನ ಶೇರ್ ಮಾಡಿರುವ ಸ್ನೇಹಾ, ನಿಜಕ್ಕೂ ಇದು ಮಜವಾಗಿತ್ತು. ಈ ವಿಡಿಯೋ ನೋಡಿದ ಎಲ್ಲರೂ ಖುಷಿಯಾಗಿದ್ರು. ಪತಿಯ ಮನೆಗೆ ಹೋಗ್ತಾ ಕಣ್ಣೀರಾಕುವ ಕಾಲ ಮುಗೀತು. ಈಗ ಹೊಸ ಜಮಾನಾದ ಹೆಣ್ಣುಮಕ್ಕಳು ಬಂದಾಗಿದೆ ಎಂದು ಶೀರ್ಷಿಕೆ ನೀಡಿದ್ದಾರೆ.
https://www.instagram.com/p/CMOOiF0AZlq/?utm_source=ig_web_copy_link