ಮಧ್ಯಪ್ರದೇಶದ ಟೈಗರ್ ರಿಸರ್ವ್ ಕ್ಷೀಣಿಸುತ್ತಿರುವ ರಣಹದ್ದುಗಳ ಮೇಲೆ ನಿಗಾ ಇಡುವ ಸಲುವಾಗಿ ರೆಡಿಯೋ ಟ್ಯಾಗಿಂಗ್ ಮಾಡಲು ಆರಂಭಿಸಿದೆ.
ಈಗಾಗಲೇ ಅಳಿವಿನಂಚಿನಲ್ಲಿರುವ ಪಕ್ಷಿಗಳ ಚಲನವಲನಗಳನ್ನ ಪತ್ತೆ ಮಾಡುವ ಉದ್ದೇಶದಿಂದ ಮಧ್ಯಪ್ರದೇಶ ವನ್ಯಜೀವಿ ಸಂಸ್ಥೆ ಈ ಯೋಜನೆಯನ್ನ ಆರಂಭಿಸಿದೆ. ಈ ಯೋಜನೆಯ ಪ್ರಾಥಮಿಕ ಹಂತವಾಗಿ 25 ರಣಹದ್ದುಗಳನ್ನ ರೆಡಿಯೋ ಟ್ಯಾಗ್ ಮಾಡಲಾಗಿದೆ.
ಈ ಹೊಸ ಯೋಜನೆಯನ್ನ ಸುಮಾರು 10 ದಿನಗಳ ಹಿಂದೆ ಆರಂಭಿಸಲಾಗಿದೆ. ಆದಾಗಿಯೂ ಪಕ್ಷಿಗಳನ್ನ ರೆಡಿಯೋ ಟ್ಯಾಗ್ ಮಾಡುವ ನೈಜ ಪ್ರಕ್ರಿಯೆ ಡಿಸೆಂಬರ್ 5 ರಿಂದ 10ರೊಳಗೆ ಆರಂಭವಾಗಲಿದೆ. ಪಕ್ಷಿಗಳಿಗೆ ಆಮಿಷವೊಡ್ಡಲು ಮಾಂಸಗಳಿಂದ ತುಂಬಿದ ದೊಡ್ಡ ಪಂಜರವನ್ನ ಉದ್ಯಾನವನದಲ್ಲಿ ಇಡಲಾಗಿದೆ. ಇದರೊಳಕ್ಕೆ ರಣಹದ್ದುಗಳು ಪ್ರವೇಶಿಸುತ್ತಿದ್ದಂತೆಯೇ ರೆಡಿಯೋ ಟ್ಯಾಗ್ ಆರಂಭವಾಗುತ್ತೆ.
ಮೂರು ದಶಕಗಳಲ್ಲಿ ದೇಶದಲ್ಲಿದ್ದ ರಣಹದ್ದುಗಳ ಸಂಖ್ಯೆ ನಾಲ್ಕು ಕೋಟಿಯಿಂದ ನಾಲ್ಕು ಲಕ್ಷಕ್ಕೆ ಬಂದು ತಲುಪಿದೆ ಅಂತಾ ಕೇಂದ್ರ ಪರಿಸರ ಖಾತೆ ಸಚಿವ ಪ್ರಕಾಶ್ ಜಾವ್ಡೇಕರ್ ಹೇಳಿದ್ದಾರೆ. ಹೀಗಾಗಿ ರಣಹದ್ದುಗಳ ಮೇಲೆ ನಿಗಾ ಇಡಲು ನಿರ್ಧರಿಸಲಾಗಿದೆ.