
ವಿಧಾನಸಭಾ ಚುನಾವಣೆಗೆ ಇನ್ನೇನು ತಿಂಗಳುಗಳು ಬಾಕಿ ಇರುವಾಗಲೇ ಈ ವಿಡಿಯೋ ಸಖತ್ ಸೌಂಡ್ ಮಾಡ್ತಿದೆ.
ಶುಕ್ರವಾರ ಈ ವಿಡಿಯೋವನ್ನ ಯುಟ್ಯೂಬ್ನಲ್ಲಿಪೋಸ್ಟ್ ಮಾಡಲಾಗಿದೆ. ನೀಲಿ ಬಣ್ಣದ ಟೀ ಶರ್ಟ್ನಲ್ಲಿ ರಾಹುಲ್ ಗಾಂಧಿ ಕಾಣಿಸಿಕೊಂಡಿದ್ದಾರೆ. ಅಡುಗೆ ಮಾಡುವ ಮಧ್ಯದಲ್ಲಿ ರಾಹುಲ್ ಗಾಂಧಿ ತಮಿಳು ಮಾತನಾಡೋದನ್ನ ನೀವು ಕಾಣಬಹುದಾಗಿದೆ.
ಕಲ್ಲುಪ್ಪು, ಥಾಯಿರ್, ನಲ್ಲ ಇರುಕು ಹೀಗೆ ಸಾಕಷ್ಟು ತಮಿಳು ಭಾಷೆಯನ್ನ ರಾಹುಲ್ ಬಳಕೆ ಮಾಡಿದ್ದಾರೆ. ವಿಲೇಜ್ ಕುಕ್ಕಿಂಗ್ ಚಾನೆಲ್ ಸದಸ್ಯರು ತಯಾರಿಸಿದ ಮಶ್ರೂಮ್ ಬಿರಿಯಾನಿಯನ್ನ ಹುಲ್ಲು ಹಾಸಿನ ಮೇಲೆ ಕುಳಿತು ಸವಿದಿದ್ದಾರೆ.
ವಿಶೇಷ ಅಂದ್ರೆ ಈ ಬಿರಿಯಾನಿಗೆ ರಾಯತ ತಯಾರು ಮಾಡಿದ್ದು ಸ್ವತಃ ರಾಹುಲ್ ಗಾಂಧಿ. ಕಾರ್ಯಕ್ರಮದಲ್ಲಿ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಹ ಇದ್ದಾರೆ.