alex Certify ವೈರಾಣುಗಳ ವಿರುದ್ಧ ’ಅಸ್ತ್ರ’ ಸಿದ್ಧಪಡಿಸಿದ ಐಐಟಿ ವಿದ್ಯಾರ್ಥಿಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೈರಾಣುಗಳ ವಿರುದ್ಧ ’ಅಸ್ತ್ರ’ ಸಿದ್ಧಪಡಿಸಿದ ಐಐಟಿ ವಿದ್ಯಾರ್ಥಿಗಳು

IIT Guwahati Students Develop Pocket-sized Device 'UV-Astra' to ...

ಕೋವಿಡ್-19 ಸಾಂಕ್ರಮಿಕದಿಂದ ಸೇಫ್ ಆಗಿರಲು ಮನುಕುಲ ಅದಾಗಲೇ ತನ್ನ ಜೀವನಶೈಲಿಯಲ್ಲಿ ಸಾಕಷ್ಟು ಮಾರ್ಪಾಡುಗಳನ್ನು ಮಾಡಿಕೊಳ್ಳುತ್ತಿದ್ದು, ಇದೇ ವೇಳೆ ತನ್ನ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಲು ಆವಿಷ್ಕಾರಿ ಕ್ರಮಗಳನ್ನು ಕಂಡುಕೊಳ್ಳುತ್ತಿದೆ.

ಇದೀಗ ಗುವಾಹಾಟಿಯ ಐಐಟಿ ವಿದ್ಯಾರ್ಥಿಗಳು ‘UV-Astra’ ಹೆಸರಿನಲ್ಲಿ ನ್ಯಾನೋ ತಂತ್ರಜ್ಞಾನವೊಂದನ್ನು ಸಿದ್ಧಪಡಿಸಿದ್ದಾರೆ. ಈ ಡಿವೈಸ್‌ ಮೂಲಕ ಅತಿ ನೇರಳೆ ಕಿರಣಗಳಿಂದ (UV rays) ಕೇವಲ ಮೂರೇ ಸೆಕೆಂಡ್‌ಗಳಲ್ಲಿ ಯಾವುದೇ ಭೌತಿಕ ವಸ್ತುಗಳ ಮೇಲ್ಮೈಯಲ್ಲಿರುವ ವೈರಸ್‌ಗಳು ಹಾಗೂ ಬ್ಯಾಕ್ಟೀರಿಯಾಗಳನ್ನು ಕೊಲ್ಲಬಹುದಾಗಿದೆ.

ಈ ಡಿವೈಸ್ ಮೂಲಕ ವೈಯಕ್ತಿಕ ರಕ್ಷಣಾ ಸಾಧನ (PPE) ಸಹ ವೈರಸ್‌ ಮುಕ್ತವಾಗಿಸಿ ಮರುಬಳಕೆ ಮಾಡಬಹುದಾಗಿದೆ ಎಂದು ಇದರ ತಯಾರಕರಾದ ಅನಂತ್‌ ಮಿತ್ತಲ್ ಹಾಗೂ ಶುಭಂ ಯೆನ್ನಾವರ್‌ ತಿಳಿಸಿದ್ದಾರೆ.

ತನ್ನ ಪ್ರಭಾವ ಪ್ರದೇಶದಲ್ಲಿರುವ 99.9%ನಷ್ಟು ವೈರಾಣುಗಳನ್ನು ಕೊಲ್ಲಬಲ್ಲ ಈ ಸಾಧನವನ್ನು ಮೊಬೈಲ್ ಫೋನ್ ‌ಗಳ ಮೂಲಕ ಚಾರ್ಚ್ ಮಾಡಬಹುದಾಗಿದ್ದು, 5,000 ಗಂಟೆಗಳ ಜೀವಿತಾವಧಿಯನ್ನು ಹೊಂದಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...