ಸೈಬಿರಿಯನ್ ಹುಲಿ ಮರವನ್ನ ಹಿಡಿದುಕೊಂಡು ನಿಂತಿರೋ ಫೋಟೋ ತೆಗೆಯೋ ಮೂಲಕ ಸೆರ್ಗೆ ಗೋರ್ಶ್ಕೋ ಕೆಲದಿನಗಳ ಹಿಂದಷ್ಟೇ ವೈಲ್ಡ್ಲೈಫ್ ಫೋಟೋಗ್ರಾಫರ್ ಪ್ರಶಸ್ತಿಯನ್ನ ಪಡೆದುಕೊಂಡಿದ್ರು.
ಇದೇ ಫೋಟೋವನ್ನ ಟ್ವಿಟರ್ನಲ್ಲಿ ಶೇರ್ ಮಾಡಿರುವ ಐಎಫ್ಎಸ್ ಅಧಿಕಾರಿ ಪರ್ವೀನ್ ಕಾಸ್ವಾನ್, ಈ ಚಿತ್ರ ಸೆರ್ಗೆ ಅವರಿಗೆ ವೈಲ್ಡ್ಲೈಫ್ ಫೋಟೋಗ್ರಾಫರ್ ಪ್ರಶಸ್ತಿಯನ್ನ ತಂದುಕೊಟ್ಟಿದೆ. ಅಮುರ್ ಹೆಣ್ಣು ಹುಲಿ ಪುರಾತನ ಮಂಚೂರಿಯನ್ ಫರ್ ಎಂಬ ಮರವನ್ನ ತಬ್ಬಿಕೊಂಡಿದೆ. ಈ ಮೂಲಕ ಅಳಿವನಂಚಿಲ್ಲಿರುವ ಪ್ರಾಣಿಯೊಂದು ತನ್ನ ಮನೆಯನ್ನ ರಕ್ಷಿಸಿಕೊಳ್ತಿದೆ ಅಂತಾ ಬರೆದುಕೊಂಡಿದ್ದಾರೆ,
50000 ಚಿತ್ರಗಳಲ್ಲಿ ಆಯ್ಕೆಯಾದ ಈ ಫೋಟೋ ಸೆರ್ಗೇ ಅವರಿಗೆ ಅತ್ಯುನ್ನತ ಪ್ರಶಸ್ತಿಯನ್ನ ಮುಡಿಗೇರಿಸಿದೆ. ಈ ಚಿತ್ರ ಲಂಡನ್ನ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ ವಸ್ತು ಪ್ರದರ್ಶನದಲ್ಲಿ ಭಾಗಿಯಾಗಲಿದೆ.
https://www.instagram.com/p/CGTCSsyK_A9/?utm_source=ig_web_copy_link