alex Certify ಈ ಹಾವಿನ ಜಾತಿ ಬಲ್ಲಿರಾ ಎಂದು ಪ್ರಶ್ನಿಸಿದ ಐಎಫ್​ಎಸ್​ ಅಧಿಕಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಹಾವಿನ ಜಾತಿ ಬಲ್ಲಿರಾ ಎಂದು ಪ್ರಶ್ನಿಸಿದ ಐಎಫ್​ಎಸ್​ ಅಧಿಕಾರಿ

ಭಾರತೀಯ ಅರಣ್ಯ ಸೇವೆ ಅಧಿಕಾರಿ ಪ್ರವೀಣ್ ಕಸ್ವಾನ್ ಆಗಾಗ್ಗೆ ಪ್ರಾಣಿ ಸಾಮ್ರಾಜ್ಯದ ಆಸಕ್ತಿದಾಯಕ ಸಂಗತಿಗಳು ಮತ್ತು ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಈ ವೇಳೆ ಅವರು ಹಸಿರು ಪೊದೆಗಳ ನಡುವೆ ಇರುವ ಹಾವಿನ ಫೋಟೋ ಶೇರ್​ ಮಾಡಿದ್ದಾರೆ. ಇದು ಯಾವ ತಳಿಯ ಹಾವು ಹೇಳಿ ನೋಡೋಣ ಎಂದು ಅವರು ಸವಾಲು ಹಾಕಿದ್ದಾರೆ.

ಹಾವುಗಳಲ್ಲಿ ವಿಭಿನ್ನ ತಳಿಗಳಿದ್ದು, ಹೆಚ್ಚಿನವರು ಅವುಗಳನ್ನು ತಪ್ಪಾಗಿ ಗ್ರಹಿಸುತ್ತಾರೆ. ಈ ಹಿನ್ನೆಲೆಯಲ್ಲಿ ಹಾವಿನ ಹೆಸರನ್ನು ಹೇಳುವಂತೆ ಪ್ರವೀಣ್​ ಅವರು ಸವಾಲು ಹಾಕಿದ್ದಾರೆ. ಈ ಹಾವು ಬಹು ಸೌಂದರ್ಯಯುತವಾಗಿದ್ದು, ಅದರ ಜಾತಿ ಹೇಳಿ ಎಂದು ಕೇಳಿದ್ದಾರೆ.

ಹಲವರು ಈ ಹಾವನ್ನು ನಾಗರಹಾವು ಎಂದಿದ್ದರೆ ಕೆಲವರು ಒಂದೊಂದು ಬಗೆಯ ಹಾವಿನ ಜಾತಿ ಹೇಳಿದ್ದಾರೆ. ಈ ಹಾವು ರಾಜಕಾರಣಿಗಳಂತೆ ತೋರುತ್ತಿದೆ ಎಂದು ನೆಟ್ಟಿಗರೊಬ್ಬರು ತಮಾಷೆಯನ್ನೂ ಮಾಡಿದ್ದಾರೆ.

ಇದರ ಜತೆಗೆ ಐಎಫ್‌ಎಸ್ ಅಧಿಕಾರಿ ನಾಗರಹಾವು ಕನ್ನಡಕ ಹಾವನ್ನು ತಿನ್ನುತ್ತಿರುವ ಫೋಟೋವನ್ನೂ ಟ್ವೀಟ್​ ಮಾಡಿದ್ದಾರೆ. ಕಿಂಗ್ ಕೋಬ್ರಾದ ವೈಜ್ಞಾನಿಕ ಹೆಸರು ಓಫಿಯೋಫಾಗಸ್ ಹನ್ನಾ ಗ್ರೀಕ್‌ನಿಂದ ಬಂದಿದೆ ಎಂದು ಅವರು ಉಲ್ಲೇಖಿಸಿದ್ದಾರೆ.

ಇದರ ನಿಜವಾದ ಹೆಸರು, “ಕಿಂಗ್ ಕೋಬ್ರಾ; ಓಫಿಯೋಫಾಗಸ್ ಹನ್ನಾ. ‘ಒಫಿಯೋಫಾಗಸ್’ ಶಬ್ದ ಗ್ರೀಕ್‌ನಿಂದ ಬಂದಿದೆ, ಇದರರ್ಥ ‘ಹಾವು-ತಿನ್ನುವುದು’ ಎಂದು. ಇದರ ಜತೆಗಿರುವ ಹನ್ನಾ ಗ್ರೀಕ್ ಪುರಾಣಗಳಲ್ಲಿ ಮರ-ವಾಸಿಸುವ ಅಪ್ಸರೆಗಳ ಹೆಸರಿನಿಂದ ಬಂದಿದೆ ಎಂದು ಅವರು ನಾಗರಹಾವಿನ ಕುರಿತು ನಂತರ ಉಲ್ಲೇಖಿಸಿದ್ದಾರೆ. ಈ ನಾಗರಹಾವು 5.5 ಮೀಟರ್ (8 ಅಡಿ) ಉದ್ದವಿರಬಹುದು ಮತ್ತು ಮುಖ್ಯವಾಗಿ ಭಾರತ, ಇಂಡೋನೇಷಿಯಾ ಮತ್ತು ಫಿಲಿಪೈನ್ಸ್‌ನಲ್ಲಿ ಕಂಡುಬರುತ್ತವೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...