alex Certify ʼಆರೋಗ್ಯ ಸೇತುʼ ಆಪ್ ಇಲ್ಲವೆಂದ್ರೆ ಸಿಗಲ್ಲ ಈ ಸೌಲಭ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಆರೋಗ್ಯ ಸೇತುʼ ಆಪ್ ಇಲ್ಲವೆಂದ್ರೆ ಸಿಗಲ್ಲ ಈ ಸೌಲಭ್ಯ

ಭಾರತದಲ್ಲಿ 10 ಮಿಲಿಯನ್ ಭಾರತೀಯರು ಆರೋಗ್ಯ ಸೆತು ಆಪ್ ಬಳಸುತ್ತಿದ್ದಾರೆ. ಕೊರೊನಾ ವೈರಸ್ ನಿಂದ ರಕ್ಷಣೆ ಪಡೆಯಲು, ಕೊರೊನಾ ಬಗ್ಗೆ ಮಾಹಿತಿ ಪಡೆಯಲು ನೆರವಾಗ್ತಿದೆ. ಅಪ್ಲಿಕೇಶನ್‌ ಶುರುವಾದ ಮೊದಲ 13 ದಿನಗಳಲ್ಲಿ 5 ಕೋಟಿ ಬಳಕೆದಾರರನ್ನು ತಲುಪಿತ್ತು. ಆರೋಗ್ಯ ಸೇತು ಆಪ್ ಡೌನ್‌ಲೋಡ್ ಮಾಡಿಕೊಳ್ಳುವಂತೆ ಭಾರತ ಸರ್ಕಾರ ಜನರಿಗೆ ಪದೇ ಪದೇ ಮನವಿ ಮಾಡುತ್ತಿದೆ. ಅಪ್ಲಿಕೇಷನ್ ಇಲ್ಲವಾದ್ರೆ ಕೆಲ ಸೌಲಭ್ಯಗಳು ಜನರಿಗೆ ಲಭ್ಯವಾಗುವುದಿಲ್ಲ.

ಸರ್ಕಾರಿ ಮತ್ತು ಖಾಸಗಿ ವಲಯದ ಉದ್ಯೋಗಿಗಳಿಗೆ ಆರೋಗ್ಯ ಸೇತು ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳುವುದನ್ನು ಕಡ್ಡಾಯವಾಗಿದೆ. ಈ ಅಪ್ಲಿಕೇಷನ್ ಇಲ್ಲವಾದ್ರೆ ವೈದ್ಯರ ಸಮಾಲೋಚನೆಯ ಸೌಲಭ್ಯ ಸಿಗುವುದಿಲ್ಲ. ಶೀಘ್ರವೇ ಇದನ್ನು ಜೋಡಿಸಲಾಗುವುದು.

ಈ ಅಪ್ಲಿಕೇಶನ್‌ ಮೂಲಕ  ಇ-ಪಾಸ್ ಪಡೆಯಲು ಸಾಧ್ಯವಾಗುತ್ತದೆ. ಆರೋಗ್ಯ ಸೇತು ಅಪ್ಲಿಕೇಶನ್‌ನಲ್ಲಿ ಹೊಸ ವಿಭಾಗವನ್ನು ಸೇರಿಸಲಾಗಿದೆ. ಅಪ್ಲಿಕೇಶನ್‌ನಲ್ಲಿ ಕಂಡುಬರುವ ಮಾಹಿತಿಯ ಪ್ರಕಾರ  ಇ-ಪಾಸ್ ಸೌಲಭ್ಯ ಶೀಘ್ರದಲ್ಲೇ ಪ್ರಾರಂಭವಾಗಲಿದೆ.

ಆನ್‌ಲೈನ್ ಮೂಲಕ ಔಷಧಿ ವಿತರಣೆಗೆ ಆರೋಗ್ಯ ಸೇತು ಕೆಲ ಕಂಪನಿ ಜೊತೆ ಒಪ್ಪಂದ ಮಾಡಿಕೊಂಡಿದೆ. ಇದ್ರ ಸೌಲಭ್ಯ ಕೂಡ ಅಪ್ಲಿಕೇಷನ್ ಇಲ್ಲದವರಿಗೆ ಲಭ್ಯವಾಗುವುದಿಲ್ಲ.

ವಿಶೇಷ ಪ್ಯಾಸೆಂಜರ್ ರೈಲುಗಳಲ್ಲಿ ಪ್ರಯಾಣಿಸಲು ಫೋನ್‌ನಲ್ಲಿ  ಆರೋಗ್ಯ ಸೆತು ಆಪ್  ಡೌನ್‌ಲೋಡ್ ಮಾಡುವುದು ಕಡ್ಡಾಯ. ರೈಲ್ವೆ ಸಚಿವಾಲಯ ಟ್ವೀಟ್ ಮಾಡುವ ಮೂಲಕ ತನ್ನ ಮಾಹಿತಿಯನ್ನು ನೀಡಿದೆ. ಅಪ್ಲಿಕೇಷನ್ ಇಲ್ಲದವರಿಗೆ ರೈಲು ಪ್ರಯಾಣಕ್ಕೆ ಅವಕಾಶ ಸಿಗುವುದಿಲ್ಲ.

ಆರೋಗ್ಯ ಸೇತು ಅಪ್ಲಿಕೇಶನ್ ವಿಮಾನಕ್ಕೂ ಕಡ್ಡಾಯವಾಗಿದೆ. ಇನ್ನು ಉತ್ತರ ಪ್ರದೇಶದ ಗೋರಕ್ಪುರದಲ್ಲಿ ಆರೋಗ್ಯ ಸೇತು ಅಪ್ಲಿಕೇಷನ್ ಇಲ್ಲದವರಿಗೆ ಮನೆಯಿಂದ ಹೊರಬರಲು ಅವಕಾಶವಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...