alex Certify ಪತ್ನಿಯ ಕಾಮದಾಹಕ್ಕೆ ರೋಸಿಹೋದ ಪತಿಯಿಂದಲೇ ಘೋರ ಕೃತ್ಯ: ಭೀಕರ ಹತ್ಯೆಗೆ ಬೆಚ್ಚಿ ಬಿದ್ದ ಜನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತ್ನಿಯ ಕಾಮದಾಹಕ್ಕೆ ರೋಸಿಹೋದ ಪತಿಯಿಂದಲೇ ಘೋರ ಕೃತ್ಯ: ಭೀಕರ ಹತ್ಯೆಗೆ ಬೆಚ್ಚಿ ಬಿದ್ದ ಜನ

ಹೈದರಾಬಾದ್: ಪತ್ನಿಯ ಅಕ್ರಮ ಸಂಬಂಧದಿಂದ ಆಕ್ರೋಶಗೊಂಡ ವ್ಯಕ್ತಿಯೊಬ್ಬ ಆಕೆಯ ತಲೆ ಕತ್ತರಿಸಿ ಪ್ರಿಯಕರನ ಮನೆಯೆದುರು ತಂದಿಟ್ಟಿದ್ದಾನೆ.

ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಅನಂತಸಾಗರ್ ಗ್ರಾಮದಲ್ಲಿ ಈ ಭೀಕರ ಘಟನೆ ನಡೆದಿದೆ. ಜರ್ರು ಸಾಯಿಲು ಎಂಬಾತನೇ ಇಂತಹ ಕೃತ್ಯವೆಸಗಿದ ಆರೋಪಿ. ತನ್ನ ಪತ್ನಿ ಅಂಶಮ್ಮ(35)ಳ ತಲೆ ಕತ್ತರಿಸಿ ಅದನ್ನು ಬೈಕ್ ನಲ್ಲಿ 5 ಕಿಲೋಮೀಟರ್ ದೂರದಲ್ಲಿರುವ ನಾರಾಯಣಖೇಡ ಗ್ರಾಮಕ್ಕೆ ತೆಗೆದುಕೊಂಡು ಹೋಗಿದ್ದಾನೆ. ಪತ್ನಿಯೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದ ವ್ಯಕ್ತಿಯ ಮನೆ ಬಾಗಿಲಲ್ಲೇ ಪತ್ನಿಯ ತಲೆ ಇಟ್ಟು ಪರಾರಿಯಾಗಿದ್ದಾನೆ.

ಪತ್ನಿಯ ಅಕ್ರಮ ಸಂಬಂಧದ ವಿಚಾರವಾಗಿ ದಂಪತಿಯ ನಡುವೆ ಭಾರಿ ಜಗಳವಾಗುತ್ತಿತ್ತು. ಇಬ್ಬರ ನಡುವೆ ಇದೇ ವಿಚಾರಕ್ಕೆ ಮತ್ತೆ ಜಗಳವಾಗಿದ್ದು ಈ ವೇಳೆ ಆಕ್ರೋಶಗೊಂಡ ಜರ್ರು ಸಾಯಿಲು ಪತ್ನಿಯ ತಲೆ ಕತ್ತರಿಸಿದ್ದಾನೆ ಎಂದು ನಾರಾಯಣಖೇಡ್ ಪೊಲೀಸ್ ಇನ್ಸ್ ಪೆಕ್ಟರ್ ರವೀಂದರ್ ರೆಡ್ಡಿ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...