ಆಂಬುಲೆನ್ಸ್ಗೆ ದಾರಿ ಮಾಡಲು 2 ಕಿಮೀ ಓಡಿ ಟ್ರಾಫಿಕ್ ಕ್ಲಿಯರ್ ಮಾಡಿದ ಪೇದೆ..! 05-11-2020 2:55PM IST / No Comments / Posted In: Latest News, India ಆಂಬುಲೆನ್ಸ್ಗೆ ದಾರಿ ಮಾಡಿಕೊಡುವ ಸಲುವಾಗಿ ಸಂಚಾರಿ ಠಾಣೆ ಕಾನ್ಸ್ಟೇಬಲ್ ಒಬ್ಬರು 2 ಕಿಲೋಮೀಟರ್ವರೆಗೆ ಓಡಿ ಟ್ರಾಫಿಕ್ ಕ್ಲಿಯರ್ ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದ ಘಟನೆ ಹೈದರಾಬಾದ್ನಲ್ಲಿ ನಡೆದಿದೆ. ಹೈದರಾಬಾದ್ನನ ಅಬಿಡ್ಸ್ ಜಿಪಿಒ ಜಂಕ್ಷನ್ ಬಳಿ ಈ ಘಟನೆ ನಡೆದಿದೆ. ಪೊಲೀಸ್ ಪೇದೆ ಜಿ. ಬಾಬ್ಜಿ ಎಂಬವರು ಆಂಬುಲೆನ್ಸ್ನಲ್ಲಿದ್ದ ರೋಗಿಯ ಪ್ರಾಣ ಉಳಿಸುವುದಕ್ಕಾಗಿ 2 ಕಿಲೋಮೀಟರ್ವರೆಗೆ ಓಡಿ ಸಂಚಾರ ದಟ್ಟಣೆ ನಿಯಂತ್ರಣ ಮಾಡಿದ್ದಾರೆ. ಈ ಘಟನೆ ಸೋಮವಾರ ನಡೆದಿದ್ದು ಪೊಲೀಸರು ಈ ವಿಡಿಯೋವನ್ನ ಬುಧವಾರ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ಬಳಿಕ ವಿಚಾರ ವೈರಲ್ ಆಗಿದೆ. ಅಂದಹಾಗೆ ಈ ಪೊಲೀಸ್ ಪೇದೆ ಆಂಬುಲೆನ್ಸ್ಗೆ ದಾರಿ ಮಾಡಿಕೊಡುವುದಕ್ಕಾಗಿ ತನ್ನ ಠಾಣಾ ವ್ಯಾಪ್ತಿಯನ್ನ ಮೀರಿ ಸಂಚಾರ ದಟ್ಟಣೆ ನಿಯಂತ್ರಿಸಿದ್ದಾರಂತೆ. ಈ ವಿಚಾರವಾಗಿ ಮಾತನಾಡಿದ ಬಾಬ್ಜಿ, ನನಗೆ ಆಂಬುಲೆನ್ಸ್ನಲ್ಲಿ ಇದ್ದ ರೋಗಿಯ ಪರಿಚಯವಿರಲಿಲ್ಲ. ಆದರೂ ಒಂದು ಜೀವ ಕಾಪಾಡಬೇಕು ಅಂತಾ ಈ ಪ್ರಯತ್ನ ಮಾಡಿದೆ ಅಂತಾ ಹೇಳಿದ್ದಾರೆ. HTP officer Babji of Abids Traffic PS clearing the way for ambulance..Well done..HTP in the service of citizens..👍👍@HYDTP pic.twitter.com/vFynLl7VVK — Addl CP Traffic (@AddlCPTrHyd) November 4, 2020