alex Certify ATM ನಲ್ಲಿದ್ದ ಸ್ಯಾನಿಟೈಸರ್‌ ನ್ನು ಬಿಡಲಿಲ್ಲ ಭೂಪ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ATM ನಲ್ಲಿದ್ದ ಸ್ಯಾನಿಟೈಸರ್‌ ನ್ನು ಬಿಡಲಿಲ್ಲ ಭೂಪ….!

ಕೊರೊನಾ ವೈರಸ್​ ಭೂಮಂಡಲಕ್ಕೆ ಕಾಲಿಟ್ಟಾಗಿನಿಂದ ಮಾಸ್ಕ್​ ಹಾಗೂ ಸ್ಯಾನಿಟೈಸರ್​ಗಳು ಮಾನವನ ಆಪ್ತಬಂಧುವಾಗಿ ಬದಲಾಗಿದೆ. ಕಚೇರಿಗಳಲ್ಲಿ, ಹೋಟೆಲ್​ಗಳಲ್ಲಿ, ಮನೆಗಳಲ್ಲಿ, ಬ್ಯಾಂಕ್​ಗಳಲ್ಲಿ ಅಷ್ಟೇ ಏಕೆ ಎಟಿಎಂ ಕೇಂದ್ರಗಳಲ್ಲೂ ಸಹ ಸ್ಯಾನಿಟೈಸರ್​ಗಳನ್ನ ಸಾರ್ವಜನಿಕ ಬಳಕೆಗೆ ಇಡಲಾಗ್ತಿದೆ.

ಆದರೆ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆದ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಎಟಿಎಂ ಕೇಂದ್ರದಲ್ಲಿ ಜನಬಳಕೆಗೆ ಇಟ್ಟಿದ್ದ ಸ್ಯಾನಿಟೈಸರ್​ ಬಾಟಲಿಯನ್ನೇ ಕದ್ದು ಎಸ್ಕೇಪ್ ಆಗಿದ್ದಾನೆ.

ಈ ವಿಡಿಯೋವನ್ನ ಐಪಿಎಸ್​ ಅಧಿಕಾರಿ ದೀಪಾಂಶು ಕಬ್ರಾ ಎಂಬವರು ಟ್ವಿಟರ್​ನಲ್ಲಿ ಶೇರ್​ ಮಾಡಿದ್ದಾರೆ. 33 ಸೆಕೆಂಡ್​ಗಳ ವಿಡಿಯೋದಲ್ಲಿ ಫೇಸ್​ ಮಾಸ್ಕ್​ ಧರಿಸಿದ್ದ ವ್ಯಕ್ತಿಯೊಬ್ಬ ಎಟಿಎಂ ಕಾರ್ಡ್​ನ್ನು ತನ್ನ ಪರ್ಸ್ ಒಳಗೆ ಹಾಕಿಕೊಂಡು ಬಳಿಕ ಸ್ಯಾನಿಟೈಸರ್​ನ್ನು ಕದ್ದು ತನ್ನ ಬ್ಯಾಗಿನೊಳಗೆ ಹಾಕಿಕೊಂಡು ಪರಾರಿಯಾಗಿದ್ದಾನೆ.

ಇದೊಂದು ಅತ್ಯಂತ ಕೆಟ್ಟ ಚಾಳಿಯಾಗಿದೆ. ದೇಶದಲ್ಲಿ ಮಿಲಿಯನ್​ಗಟ್ಟಲೇ ಎಟಿಎಂ ಕೇಂದ್ರಗಳಿವೆ. ಇಂತಹ ಮೂರ್ಖರಿಂದ ಸ್ಯಾನಿಟೈಸರ್​ಗಳನ್ನ ರಕ್ಷಣೆ ಮಾಡಲು 100 – 200 ರೂಪಾಯಿ ವ್ಯಯಮಾಡಿ ಸ್ಯಾನಿಟೈಸರ್​ಗಳಿಗೂ ಪಂಜರ ನಿರ್ಮಿಸಬೇಕು. ಇದಕ್ಕಾಗಿ ಒಟ್ಟು ಕೋಟಿಗಟ್ಟಲೇ ಹಣ ಖರ್ಚಾಗುತ್ತೆ. ನಿಮ್ಮ ಸರಿಯಾದ ನಡವಳಿಕೆಯಿಂದ ಈ ಹಣ ಉಳಿತಾಯವಾಗಲಿದೆ ಎಂದು ಕಬ್ರಾ ಶೀರ್ಷಿಕೆ ನೀಡಿದ್ದಾರೆ. ಅಲ್ಲದೇ ಮನುಷ್ಯರು ಸುಧಾರಿಸೋಕೆ ಸಾಧ್ಯವೇ ಇಲ್ಲ ಅಂತಲೂ ಬೇಸರ ಹೊರಹಾಕಿದ್ದಾರೆ.

ಈ ವಿಡಿಯೋ ಟ್ವಿಟರ್​ನಲ್ಲಿ ಭಾರೀ ವೈರಲ್​ ಆಗಿದೆ. ಕಮೆಂಟ್​ನಲ್ಲಿ ನೆಟ್ಟಿಗರೂ ಸಹ ಈ ವ್ಯಕ್ತಿಯ ವಿರುದ್ಧ ಆಕ್ರೋಶ ಹೊರಹಾಕ್ತಿದ್ದಾರೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...