alex Certify ಗಿನ್ನಿಸ್‌ ದಾಖಲೆಗೆ ವಿಶ್ವದ ಅತಿದೊಡ್ಡ ಮಾರ್ಕರ್​ ಪೆನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಿನ್ನಿಸ್‌ ದಾಖಲೆಗೆ ವಿಶ್ವದ ಅತಿದೊಡ್ಡ ಮಾರ್ಕರ್​ ಪೆನ್

ಕೇರಳದ ಮಹಮ್ಮದ್​​ ದಿಲೀಫ್​​ ಎಂಬವರು ವಿಶ್ವದಲ್ಲೇ ಅತ್ಯಂತ ದೊಡ್ಡ ಮಾರ್ಕರ್​ ಪೆನ್​ ನಿರ್ಮಾಣ ಮಾಡುವ ಮೂಲಕ ಗಿನ್ನೆಸ್​ ದಾಖಲೆಯ ಪುಗಳಲ್ಲಿ ತಮ್ಮ ಹೆಸರನ್ನ ನೋಂದಾಯಿಸಿದ್ದಾರೆ.

ಗಿನ್ನಿಸ್​ ವರ್ಲ್ಡ್​ ರೆಕಾರ್ಡ್​ ತನ್ನ ಅಧಿಕೃತ ಫೇಸ್​ಬುಕ್​ ಖಾತೆಯಲ್ಲಿ ಮಹಮ್ಮದ್​ ಈ ಪೆನ್ನನ್ನ ಹೇಗೆ ತಯಾರು ಮಾಡಿದ್ದಾರೆ ಎಂಬ ವಿಡಿಯೋವನ್ನ ಪೋಸ್ಟ್ ಮಾಡಿದೆ. ಮೂರು ನಿಮಿಷಗಳ ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಧೂಳೆಬ್ಬಿಸಿದೆ.

ವಿಡಿಯೋದ ಕೊನೆಯಲ್ಲಿ ದಿಲೀಫ್​ ತನ್ನ ಸ್ನೇಹಿತರ ಸಹಾಯದಿಂದ ಬೃಹತ್​ ಪೆನ್​ನ್ನ ಹಿಡಿದು ಇಂಡಿಯಾ ಎಂದು ಬರೆದಿದ್ದಾರೆ. ಈ ಪೆನ್​ 2.745m x 0.315 m ಅಳತೆ ಹೊಂದಿದೆ. ದಿಲೀಫ್​ ಸೆಪ್ಟೆಂಬರ್​ನಲ್ಲೇ ಈ ದಾಖಲೆಯನ್ನ ಮಾಡಿದ್ದಾರೆ. ಆದರೆ ಇದೀಗ ಗಿನ್ನೆಸ್​ ವಿಶ್ವ ದಾಖಲೆ ಫೇಸ್​ಬುಕ್​ ಖಾತೆಯಲ್ಲಿ ವಿಡಿಯೋ ಶೇರ್​ ಆದ ಬಳಿಕ ನೆಟ್ಟಿಗರ ಗಮನಕ್ಕೆ ಬಂದಿದೆ.‌

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...