alex Certify ಮಾರುದ್ದದ ಹೆಬ್ಬಾವು ಕಂಡು ಬೆಚ್ಚಿಬಿದ್ದ ಪಾದಚಾರಿಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾರುದ್ದದ ಹೆಬ್ಬಾವು ಕಂಡು ಬೆಚ್ಚಿಬಿದ್ದ ಪಾದಚಾರಿಗಳು

ಮುಂಬೈನ ಮಹೀಮ್ ನೇಚರ್ ಪಾರ್ಕ್ ಬಳಿ ಪಾದಾಚಾರಿ ಮಾರ್ಗದಲ್ಲಿ ಮಾರುದ್ದದ ಹೆಬ್ಬಾವು ಕಾಣಿಸಿಕೊಂಡಿದ್ದು, ಇದನ್ನು ಕಂಡ ಜನರು ಬೆಚ್ಚಿ ಬಿದ್ದಿದ್ದಾರೆ.

ಏಷ್ಯಾದ ಅತಿ ದೊಡ್ಡ ಕೊಳೆಗೇರಿ ಎಂದೇ ಹೆಸರು ಪಡೆದಿರುವ ಧಾರಾವಿಯ ಬಳಿಯೇ ಈ ಪಾರ್ಕ್ ಇದ್ದು, ಕಾಂಕ್ರೀಟ್ ಕಾಡಿನ ಮಧ್ಯೆ ಇರುವ ಈ ಪಾರ್ಕ್ ನಲ್ಲಿ ಅನೇಕ ಪ್ರಭೇದದ ಹಾವುಗಳಿವೆ.

ಆದರೆ, ಹೀಗೆ ಹಾದಿ-ಬೀದಿಯಲ್ಲಿ ಹಾವು ಹರಿದಾಡಿದ್ದು ಮಾತ್ರ ಜನರ ಆತಂಕ ಹೆಚ್ಚಿಸಿದೆ. ಬೇಲಿ ಸಂಧಿ ನುಸುಳುತ್ತಿರುವ ಹೆಬ್ಬಾವಿನ ಈ ವಿಡಿಯೋ ಇದೀಗ ವೈರಲ್ ಆಗಿದ್ದು, ವಿಡಿಯೋ ನೋಡಿದವರೂ ರೋಮಾಂಚಿತರಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...