ಮುಂಬೈನ ಮಹೀಮ್ ನೇಚರ್ ಪಾರ್ಕ್ ಬಳಿ ಪಾದಾಚಾರಿ ಮಾರ್ಗದಲ್ಲಿ ಮಾರುದ್ದದ ಹೆಬ್ಬಾವು ಕಾಣಿಸಿಕೊಂಡಿದ್ದು, ಇದನ್ನು ಕಂಡ ಜನರು ಬೆಚ್ಚಿ ಬಿದ್ದಿದ್ದಾರೆ.
ಏಷ್ಯಾದ ಅತಿ ದೊಡ್ಡ ಕೊಳೆಗೇರಿ ಎಂದೇ ಹೆಸರು ಪಡೆದಿರುವ ಧಾರಾವಿಯ ಬಳಿಯೇ ಈ ಪಾರ್ಕ್ ಇದ್ದು, ಕಾಂಕ್ರೀಟ್ ಕಾಡಿನ ಮಧ್ಯೆ ಇರುವ ಈ ಪಾರ್ಕ್ ನಲ್ಲಿ ಅನೇಕ ಪ್ರಭೇದದ ಹಾವುಗಳಿವೆ.
ಆದರೆ, ಹೀಗೆ ಹಾದಿ-ಬೀದಿಯಲ್ಲಿ ಹಾವು ಹರಿದಾಡಿದ್ದು ಮಾತ್ರ ಜನರ ಆತಂಕ ಹೆಚ್ಚಿಸಿದೆ. ಬೇಲಿ ಸಂಧಿ ನುಸುಳುತ್ತಿರುವ ಹೆಬ್ಬಾವಿನ ಈ ವಿಡಿಯೋ ಇದೀಗ ವೈರಲ್ ಆಗಿದ್ದು, ವಿಡಿಯೋ ನೋಡಿದವರೂ ರೋಮಾಂಚಿತರಾಗಿದ್ದಾರೆ.