ಗಡಿಯಲ್ಲಿ ದೇಶ ಕಾಯುವ ಯೋಧರಿಗೆ ಹವಾಮಾನ ವೈಪರಿತ್ಯದಿಂದಾಗುವ ಸಮಸ್ಯೆಗಳು ಒಂದೆರಡಲ್ಲ. ಈ ಸಮಸ್ಯೆಗೆ ಇಂಜಿನಿಯರ್ ವಾಂಗ್ಚಕ್ ಪರಿಹಾರವನ್ನ ಹುಡುಕಿದ್ದು ಪವರ್ ಹೀಟೆಡ್ ಮಿಲಿಟರಿ ಟೆಂಟ್ನ್ನು ಕಂಡು ಹಿಡಿದಿದ್ದಾರೆ. ಇದೊಂದು ಸೋಲಾರ್ ಟೆಂಟ್ ಆಗಿದ್ದು ಇದರೊಳಗೆ ವಾತಾವರಣವು ಸಮತೋಲನವಾಗಿ ಇರುತ್ತದೆ. ಅಲ್ಲದೇ ಈ ಟೆಂಟ್ ಸೌರ ಶಕ್ತಿಯಿಂದ ಕೆಲಸ ನಿರ್ವಹಿಸೋದ್ರಿಂದ ಯಾವುದೇ ತೈಲೋತ್ಪನ್ನಗಳ ಅವಶ್ಯಕತೆ ಇರೋದಿಲ್ಲ.
ಫೇಸ್ಬುಕ್ ಪೋಸ್ಟ್ ಒಂದರಲ್ಲಿ ವಾಂಗ್ಚಕ್ ತಮ್ಮ ಅನ್ವೇಷಣೆಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಹೊರಗಡೆ -14 ಡಿಗ್ರಿ ಸೆಲ್ಸಿಯಸ್ ತಾಪಮಾನ ಇದ್ದರೂ ಸಹ ಸೋಲಾರ್ ಟೆಂಟ್ನ ಒಳಗಡೆ 15 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಈ ಟೆಂಟ್ನಲ್ಲಿ 8 ರಿಂದ 10 ಸೈನಿಕರು ಇರಬಹುದಾಗಿದೆ. ಒಂದೊಂದು ಟೆಂಟ್ ಮೂವತ್ತು ಕೆಜಿ ತೂಕವನ್ನ ಹೊಂದಿದೆ.
ಅಲ್ಲದೇ ಈ ಟೆಂಟ್ನ್ನು ಲಡಾಖ್ನಲ್ಲಿ ನಿರ್ಮಾಣ ಮಾಡಿದ್ದಾಗಿ ವಾಂಗ್ಚಕ್ ಮಾಹಿತಿ ಹಂಚಿಕೊಂಡಿದ್ದಾರೆ. ವಾಂಗ್ಚಕ್ರ ಅನ್ವೇಷಣೆಯನ್ನ ನೆಟ್ಟಿಗರು ಕೊಂಡಾಡಿದ್ದಾರೆ.
https://www.facebook.com/wangchuksworld/posts/3771956042848283